ಪ್ರತಿದಿನದ ಚಪಾತಿ ತಿಂದು ಬೇಜಾರಾಗಿದ್ರೆ ಅಥವಾ ನಾಲಿಗೆಗೆ ಹೊಸ ರುಚಿ ಬೇಕೆಂದುಕೊಂಡರೆ ರವಾ ಚಪಾತಿ ಒಮ್ಮೆ ಟ್ರೈ ಮಾಡಲೇಬೇಕು. ಇದು ಸರಳವಾಗಿ ತಯಾರಾಗುವುದಲ್ಲದೆ, ರುಚಿಯಾದ ಹಾಗೆಯೇ ಆರೋಗ್ಯಕ್ಕೂ ಒಳ್ಳೆಯದು.
ಬೇಕಾಗುವ ಸಾಮಗ್ರಿಗಳು:
ಅಕ್ಕಿ ಹಿಟ್ಟು – 2 ಕಪ್
ರವಾ – 2 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಅಡುಗೆ ಎಣ್ಣೆ – ಅರ್ಧ ಕಪ್
ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ನೀರು ಹಾಕಿ, ಅದಕ್ಕೆ ಸ್ವಲ್ಪ ಉಪ್ಪು ಹಾಗೂ 1 ಚಮಚ ಎಣ್ಣೆ ಸೇರಿಸಿ. ನೀರು ಚೆನ್ನಾಗಿ ಕುದಿಯಲು ಆರಂಭವಾದ ಮೇಲೆ ಅದಕ್ಕೆ ರವಾ ಮತ್ತು ಅಕ್ಕಿ ಹಿಟ್ಟು ಸೇರಿಸಿ.
ಮಿಶ್ರಣವನ್ನು ಚೆನ್ನಾಗಿ ಕಲಸಿ, ಮೃದುವಾಗಿ ಹಿಟ್ಟನ್ನು ತಯಾರಿಸಿ. ಹಿಟ್ಟನ್ನು ಉಂಡೆಗಳಾಗಿ ಮಾಡಿ, ಚಪಾತಿ ಗಾತ್ರಕ್ಕೆ ತಟ್ಟಿ. ಬಿಸಿ ತವೆಯಲ್ಲಿ ಎರಡು ಬದಿಯೂ ಬಂಗಾರದ ಬಣ್ಣ ಬರುವವರೆಗೆ ಬೇಯಿಸಿ.