Sunday, October 12, 2025

ದೀಪಿಕಾ ಪಡುಕೋಣೆ ನಡೆಗೆ ಭಾರೀ ವಿರೋಧ: ಬಾಯ್ಕಾಟ್ ಎಂದ ನೆಟ್ಟಿಗರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಜಾಹೀರಾತಿನಲ್ಲಿ ಕಾಣಿಸಿಕೊಂಡ ರೀತಿಗೆ ವಿರೋಧ ವ್ಯಕ್ತವಾಗುತ್ತಿದೆ. ಅಬುಧಾಬಿಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಜಾಹೀರಾತಿನಲ್ಲಿ ದೀಪಿಕಾ ತಮ್ಮ ಪತಿ ರಣವೀರ್‌ ಸಿಂಗ್‌ ಜತೆ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ದೀಪಿಕಾ ಹಿಜಾಬ್‌ ಧರಿಸಿದ್ದಕ್ಕೆ ಸೋಶಿಯಲ್‌ ಮೀಡಿಯಾದಲ್ಲಿ ಅವರನ್ನು ಟ್ರೋಲ್‌ ಮಾಡಲಾಗುತ್ತಿದೆ.

ವಿಸಿಟ್‌ ಅಬುಧಾಬಿ ಅಭಿಯಾನ ಇದಾಗಿದ್ದು, ಈ ವಿಡಿಯೊಕ್ಕೆ ʼಮೇರ ಸುಕೂನ್‌ʼ ಎಂದು ಹೆಸರಿಡಲಾಗಿದೆ. ದೀಪಿಕಾ – ರಣವೀರ್‌ ಅಬುಧಾಬಿಯ ಪ್ರವಾಸಿ ತಾಣದ ಬಗ್ಗೆ ಮಾತನಾಡುತ್ತಾ, ಶೇಖ್ ಜಾಯೆದ್ ಗ್ರಾಂಡ್ ಮಸೀದಿ ಆವರಣಕ್ಕೆ ಬಂದಿದ್ದಾರೆ. ಈ ವೇಳೆ ದೀಪಿಕಾ ಹಿಬಾಬ್‌ ಧರಿಸಿ ಅಲ್ಲಿನ ವಿಶೇಷತೆ ಬಗ್ಗೆ ಮಾತನಾಡಿದ್ದಾರೆ. ಸದ್ಯ ಈ ವಿಚಾರ ಚರ್ಚೆಗೆ ಕಾರಣವಾಗಿದೆ.

ಸದ್ಯ ದೀಪಿಕಾ ಹಿಜಾಬ್‌ ಧರಿಸಿದ್ದಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ದೀಪಿಕಾ ಹಿಂದು ಸಂಸ್ಕೃತಿಗೆ ಗೌರವ ನೀಡುತ್ತಿಲ್ಲ ಎಂದು ಹಲವರು ವಾದಿಸಿದ್ದಾರೆ. ದೀಪಿಕಾ ಅವರನ್ನು ಚಿತ್ರರಂಗದಿಂದ ಬ್ಯಾನ್‌ ಮಾಡಬೇಕು ಎಂದು ನೆಟ್ಟಿಗರ ವಾದ .

ಇತ್ತ ದೀಪಿಕಾ ಫ್ಯಾನ್ಸ್‌ ಅವರ ಬೆಂಬಲಕ್ಕೆ ಧಾವಿಸಿದ್ದಾರೆ. ದೀಪಿಕಾ ಮತ್ತು ರಣವೀರ್‌ ವಿವಿಧ ಸಂದರ್ಭಗಳಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಶೇಖ್ ಜಾಯೆದ್ ಗ್ರಾಂಡ್ ಮಸೀದಿಗೆ ತೆರಳುವಾಗ ಪ್ರತಿಯೊಬ್ಬರು ಹಿಜಾಬ್‌ ಧರಿಸಬೇಕಾಗುತ್ತದೆ. ಈ ನಿಯಮವನ್ನು ಅವರು ಅನುಸರಿದ್ದಾರೆ. ಅದರಲ್ಲೇನು ತಪ್ಪು ಎಂದು ಕೆಲವರು ಪ್ರಶ್ನಿಸಿದ್ದಾರೆ.

ಕಳೆದ ವರ್ಷ ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳಿಗೆ ದುವಾ ಎಂದು ಹೆಸರಿಟ್ಟಾಗಲೂ ಭಾರಿ ವಿರೋಧ ವ್ಯಕ್ತವಾಗಿತ್ತು. ದುವಾ ಪದ ಅರೇಬಿಕ್‌ ಮತ್ತು ಇಸ್ಲಾಂ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹಲವರು ದೂರಿದ್ದರು.

error: Content is protected !!