ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಎಂಆರ್‌ಸಿಎಲ್ ಮೆಟ್ರೋ ನಿಲ್ದಾಣ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ಹೊರ ವರ್ತುಲ ರಸ್ತೆ ( ಒಆರ್‌ಆರ್ ) ಸರ್ವಿಸ್ ರಸ್ತೆಯನ್ನು ಬಂದ್ ಮಾಡಲಾಗಿದೆ.
ಈ ಬಗ್ಗೆ ಬೆಂಗಳೂರು ಸಂಚಾರ ಪೊಲೀಸರು ಸಂಚಾರ ಸಲಹೆಯನ್ನು ನೀಡಿದ್ದಾರೆ. ಈ ಪ್ರದೇಶದಲ್ಲಿ ಬರುವ 9ನೇ ಮುಖ್ಯ ರಸ್ತೆ ಜಂಕ್ಷನ್‌ನಿಂದ 5ನೇ ಮುಖ್ಯ ರಸ್ತೆ ಜಂಕ್ಷನ್‌ವರೆಗೆ ಸಾಗುತ್ತದೆ . ಇದೀಗ ಈ ರಸ್ತೆಯನ್ನು ಅಕ್ಟೋಬರ್ 6 ರಿಂದ 45 ದಿನಗಳವರೆಗೆ ಮುಚ್ಚಲಾಗುತ್ತದೆ. ಇಬ್ಬ್ಲೂರಿನಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ಕಡೆಗೆ ಬರುವ ವಾಹನಗಳು ಪರ್ಯಾಯ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ವಾಹನ ಸವಾರರು 14ನೇ ಮುಖ್ಯ ರಸ್ತೆ ಮೇಲ್ಸೇತುವೆ ಮೂಲಕ ಪ್ರಯಾಣಿಸಿ ಮುಖ್ಯ ರಸ್ತೆಯಲ್ಲಿ ಬಂದು 5ನೇ ಮುಖ್ಯ ರಸ್ತೆ ಜಂಕ್ಷನ್ ತಲುಪಬಹುದು ಅಥವಾ ಎಚ್‌ಎಸ್‌ಆರ್ ಲೇಔಟ್‌ನ ರಸ್ತೆಗಳನ್ನು ಬಳಸಿಕೊಂಡು ಸಿಲ್ಕ್ ಬೋರ್ಡ್ ಮತ್ತು ಹೊಸೂರು ಮುಖ್ಯ ರಸ್ತೆ ಕಡೆಗೆ ಸಾಗಬಹುದು ಎಂದು ಹೇಳಿದ್ದಾರೆ
ಮೆಟ್ರೋ ನಿರ್ಮಾಣ ಅವಧಿಯಲ್ಲಿ ವಾಹನ ದಟ್ಟನೆಯನ್ನು ಕಡಿಮೆ ಮಾಡಲು ಹಾಗೂ ಸುಗಮ ಸಂಚಾರಕ್ಕಾಗಿ ಈ ವ್ಯವಸ್ಥೆಯನ್ನು ಪಾಲಿಸಬೇಕು ಹಾಗೂ ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಸಂಚಾರ ಅಧಿಕಾರಿಗಳು ಹೇಳಿದ್ದಾರೆ.
ಮೆಟ್ರೋ ಕೆಲಸ ನಡೀತಿದೆ! 45 ದಿನಗಳವರೆಗೆ ಬೆಂಗಳೂರಿನ ಈ ರಸ್ತೆ ಬಂದ್
