ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಜಾಲಿವುಡ್ ಸ್ಟುಡಿಯೋಗೆ ಬೀಗ ಜಡಿದ ಪರಿಣಾಮ ಬಿಗ್‌ಬಾಸ್ ಸ್ಪರ್ಧಿಗಳನ್ನ ಅಲ್ಲಿಂದ ಸ್ಥಳಾಂತರಗೊಳಿಸಿ ಚಿತ್ರೀಕರಣಕ್ಕೆ ಫುಲ್‌ಸ್ಟಾಪ್ ಇಡಲಾಗಿತ್ತು. ಇದೀಗ ಎಲ್ಲ ಸಮಸ್ಯೆ ಬಗೆಹರಿದಿದ್ದು, ಸ್ಪರ್ಧಿಗಳನ್ನು ವಾಪಾಸ್ ದೊಡ್ಮನೆಗೆ ಕಳುಹಿಸಲಾಗಿದೆ.
ದೊಡ್ಮನೆಗೆ ಕಂಟೆಸ್ಟೆಂಟ್ಸ್ ರೀ ಎಂಟ್ರಿ ಕೊಟ್ಟ ವಿಡಿಯೋ ಇದೀಗ ರಿಲೀಸ್ ಮಾಡಲಾಗಿದೆ. 17 ಸ್ಪರ್ಧಿಗಳನ್ನೊಳಗೊಂಡ ಬಿಗ್‌ಬಾಸ್ ಮನೆಯ ಮುಖ್ಯದ್ವಾರ ತೆರೆದು ಎಲ್ಲರೂ ಮನೆಗೆ ಎಂಟ್ರಿ ಕೊಡ್ತಿರುವ ವೀಡಿಯೋ ಇದೀಗ ರಿಲೀಸ್ ಆಗಿದೆ. ಒಟ್ಟು 17 ಸ್ಪರ್ಧಿಗಳನ್ನ ಬಿಗ್‌ಬಾಸ್ ಹೌಸ್ ಹತ್ತಿರದ ಈಗಲ್‌ಟನ್ ರೆಸಾರ್ಟ್ಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಮಂಗಳವಾರ ರಾತ್ರಿ 7 ಗಂಟೆಯಿಂದ ಗುರುವಾರದವರೆಗೂ ಇದ್ದ ಸ್ಪರ್ಧಿಗಳು ರಾತ್ರೋರಾತ್ರಿ ಮತ್ತೆ ಬಿಗ್‌ಬಾಸ್ ಹೌಸ್‌ಗೆ ವಾಪಸ್ಸಾಗಿದ್ದಾರೆ.
ಹೀಗೆ ವಾಪಸ್ಸಾದ ಸ್ಪರ್ಧಿಗಳನ್ನ ವೆಲ್‌ಕಮ್ ಬ್ಯಾಕ್ ಎಂದು ಹೇಳಿ ಬಿಗ್‌ಬಾಸ್ ಸ್ಪಾಗತಿಸುವ ದೃಶ್ಯವನ್ನ ವಾಹಿನಿಯು ಪ್ರೊಮೋದಲ್ಲಿ ತೋರಿಸಿದೆ. ಹೀಗೆ ರಾತ್ರೋರಾತ್ರಿ ಎಲ್ಲಾ ಸ್ಪರ್ಧಿಗಳು ಮತ್ತೆ ಬಿಗ್ ಮನೆಗೆ ಆಗಮಿಸಿದ್ದು, ಅಲ್ಪವಿರಾಮ ಪಡೆದಿದ್ದ ದೊಡ್ಮನೆಯ ಆಟ ಮತ್ತೆ ಶುರುವಾಗಿದೆ.