Sunday, October 12, 2025

ದಸರಾ ಅಂದ್ರೆ ಸುಮ್ನೇನಾ? 11 ದಿನದಲ್ಲಿ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದು ಎಷ್ಟು ಮಂದಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಶ್ವವಿಖ್ಯಾತ ಮೈಸೂರು ದಸರಾ ಯಶಸ್ವಿಯಾಗಿ ಮುಗಿದಿದ್ದು, ಈ ಬಾರಿ ದಸರಾಗೆ ಕಳೆದ ಬಾರಿಗಿಂತ ಹೆಚ್ಚು ಜನರು ಆಗಮಿಸಿದ್ದರು. ಈ ಬಾರಿ 11 ದಿನದ ದಸರಾದಲ್ಲಿ ಚಾಮುಂಡಿ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ.

ದಸರಾದಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರ ವರೆಗೆ ಚಾಮುಂಡಿ ಬೆಟ್ಟಕ್ಕೆ ಬರೋಬ್ಬರಿ 6 ಲಕ್ಷಕ್ಕೂ ಅಧಿಕ ಭಕ್ತರು ಹಾಗೂ ಪ್ರವಾಸಿಗರು ಆಗಮಿಸಿ ತಾಯಿ ಚಾಮುಂಡಿಯ ಆಶೀರ್ವಾದ ಪಡೆದಿದ್ದಾರೆ.

ಪ್ರತಿನಿತ್ಯ ಸುಮಾರು 50 ಸಾವಿರ ಭಕ್ತರು ಭೇಟಿ ನೀಡಿದ್ದಾರೆ. ಜಂಬೂಸವಾರಿಯ ದಿನದಂದು ಒಂದೇ ದಿನ ಬರೋಬ್ಬರಿ 80 ಸಾವಿರ ಜನರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಈ ಬಾರಿಯ ಜನದಟ್ಟಣೆಯಿಂದ ಚಾಮುಂಡಿ ಬೆಟ್ಟದ ಆದಾಯಕ್ಕೆ ಚಿಮ್ಮುಹಲಗೆಯಾಗಿದ್ದು, ಎಲ್ಲರ ಕುತೂಹಲದ ಕಣ್ಣು ಈಗ ಕಾಣಿಕೆ ಸಂಗ್ರಹದ ಲೆಕ್ಕದ ಮೇಲಿದೆ.

error: Content is protected !!