Sunday, October 12, 2025

ಪ್ರಯಾಣಿಕರೇ ಗಮನಿಸಿ, ಬೆಂಗಳೂರಿನ ಈ ರಸ್ತೆಯಲ್ಲಿ 21 ದಿನ ಸಂಚಾರ ನಿರ್ಬಂಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎಚ್​ಎಎಲ್ ಏರ್ಪೋರ್ಟ್​ ಸಂಚಾರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಪಣತ್ತೂರು ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿ ಹಿನ್ನೆಲೆ ಬೆಂಗಳೂರಿನಲ್ಲಿ 21 ದಿನಗಳ ಕಾಲ ಸಂಚಾರ ನಿರ್ಬಂಧಿಸಲಾಗಿದ್ದು, ಬೆಂಗಳೂರು ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಪಣತ್ತೂರು ಮುಖ್ಯ ರಸ್ತೆಯಲ್ಲಿ ಬಿಬಿಎಂಪಿ ವತಿಯಿಂದ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಅಕ್ಟೋಬರ್ 10 ರಿಂದ 21 ದಿನಗಳ ಕಾಲ ಸಂಚಾರ ವಾಹನ ಸಂಚಾರಕ್ಕೆ ಅಡಚಣೆಯಾಗಬಹುದು ಎಂಬ ಕಾರಣಕ್ಕೆ ಬೆಂಗಳೂರು ಸಂಚಾರ ಪೊಲೀಸರು ಸವಾರರಿಗೆ ಮುನ್ಸೂಚನೆ ನೀಡಿದ್ದಾರೆ. ಪಣತ್ತೂರು ಮುಖ್ಯ ರಸ್ತೆಯ ಪಣತ್ತೂರು ರೈಲ್ವೇ ಬ್ರಿಡ್ಜ್​ನಿಂದ ಬೋಗನಹಳ್ಳಿ ಜಂಕ್ಷನ್​ ವರೆಗೆ ಎರಡು ಬದಿಯ ಸಂಚಾರ ನಿರ್ಬಂಧಿಸಲಾಗಿದೆ.

ವೈಟ್​ಫೀಲ್ಡ್ ಮತ್ತು ವರ್ತೂರು ಕಡೆಯಿಂದ ಪಣತ್ತೂರು ಮುಖ್ಯ ರಸ್ತೆಯ ಮುಖಾಂತರ ಕಾಡುಬೀಸನಹಳ್ಳಿ ಮತ್ತು ದೇವರಬೀಸನಹಳ್ಳಿ ಕಡೆಗೆ ಚಲಿಸುವ ವಾಹನಗಳು ಬಳಗೆರೆ ಟಿ ಜಂಕ್ಷನ್ ಹತ್ತಿರ ಬಲತಿರುವು ಪಡೆದು, ವಿಬ್ ಗಯಾರ್ ರಸ್ತೆಯ ಮುಖಾಂತರ ವರ್ತೂರು ಮುಖ್ಯ ರಸ್ತೆ ಕಡೆಗೆ ಸಂಚರಿಸಿ ಮಾರತ್ತಹಳ್ಳಿ ಬ್ರಿಡ್ಜ್ ಹತ್ತಿರ ಎಡ ತಿರುವು ಪಡೆದು ಹೊರ ವರ್ತುಲ ರಸ್ತೆ ತಲುಪಿ ಕಾಡುಬೀಸನಹಳ್ಳಿ ಮತ್ತು ದೇವರಬೀಸನಹಳ್ಳಿ ಕಡೆಗೆ ಹೋಗಬಹುದಾಗಿದೆ.

ದೇವರಬೀಸನಹಳ್ಳಿ ಮತ್ತು ಬೆಳ್ಳಂದೂರು ಕಡೆಯಿಂದ ಪಣತ್ತೂರು ಮುಖ್ಯ ರಸ್ತೆಯ ಮುಖಾಂತರ ವರ್ತೂರು ಮತ್ತು ವೈಟ್​ಫೀಲ್ಡ್ ಕಡೆಗೆ ಸಂಚರಿಸುವ ವಾಹನಗಳು ಹೊರ ವರ್ತುಲ ರಸ್ತೆಯ ಮುಖಾಂತರ ಮಾರತ್ತಹಳ್ಳಿ ಬ್ರಿಡ್ಜ್ ಕಡೆಗೆ ಸಂಚರಿಸಿ ವರ್ತೂರು ಮುಖ್ಯರಸ್ತೆ ತಲುಪಿ ವರ್ತೂರು ಮತ್ತು ವೈಟ್​ಫೀಲ್ಡ್ ಕಡೆಗೆ ಸಂಚರಿಸಬಹುದಾಗಿದೆ.

error: Content is protected !!