ಹೊಸದಿಗಂತ ವರದಿ ಶ್ರೀರಂಗಪಟ್ಟಣ:
ತಾಲೂಕಿನ ದರಸಗುಪ್ಪೆ ಗ್ರಾಮದ ಬಳಿ ಹರಿಯುವ ಚಿಕ್ಕದೇವರಾಜ ಒಡಯರ್ (ಸಿಡಿಎಸ್)ಕಾಲುವೆ ಏರಿ ಹೊಡೆದ ಪರಿಣಾಮ ನೂರಾರೂ ಎಕರೆ ಜಮೀನು ಮುಳುಗಡೆಯಾಗಿದೆ.
ಈ ನಾಲೆ ವ್ಯಾಪ್ತಿಯಲ್ಲಿ ಬರುವ ಕೂಡಲಕುಪ್ಪೆ, ದರಸಗುಪ್ಪೆ, ಕೆನ್ನಾಳು, ಬಾಬುರಾಯನಕೊಪ್ಪಲು, ಕಿರಂಗೂರಿನ ಗ್ರಾಮದ ಕೃಷಿಕರ ಜಮೀನುಗಳಿಗೆ ನೀರು ನುಗ್ಗಿದ್ದು, ಕಬ್ಬು ಬೆಳೆ, ಭತ್ತ, ತೆಂಗು,ಅಡಿಕೆ,ಬಾಳೆಗೆ ಅಧಿಕವಾಗಿ ನೀರು ನುಗ್ಗಲಾಗಿ ಬೆಳೆ ಹಾನಿಯಾಗಿದೆ.
ಈ ಭಾಗದ ರೈತರಾದ ಶಿವಲಿಂಗೇಗೌಡ, ಅನುಸೂಯ ಕರೀಗೌಡ, ಕೃಷ್ಣ, ಸ್ವಾಮಿಗೌಡ, ಕೆ. ಗೋಪಾಲ್, ಚೆನ್ನೇಗೌಡ ಆರ್, ಚಂದ್ರು ವಿಜಿ, ಶಂಕರ್‌ನಾರಾಯಣ್, ನಿಂಗೇಗೌಡ, ಕೆ.ಎನ್. ಕುಮಾರ್, ಶ್ರೀಧರ್, ರವಿತಮ್ಮಣ್ಣೇಗೌಡ, ದೊಡ್ಡಣ್ಣಯ್ಯ ಬಸವೇಗೌಡ, ಮಹದೇವು ಸೇರಿದಂತೆ ಹಲವಾರು ಮಂದಿ ರೈತರ ಜಮೀನುಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ.
ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಾತ್ಕಾಲಿಕವಾಗಿ ಸಿಡಿಎಸ್ ನಾಲೆಯಲ್ಲಿ ಹರಿಯುತ್ತಿದ್ದ ನೀರನ್ನು ನಿಲುಗಡೆ ಮಾಡಲಾಗಿದೆ.
ಸಿಡಿಎಸ್ ನಾಲೆ ಒಡೆದು 106 ಎಕರೆ ಜಮೀನು ಮುಳುಗಡೆ: ಕಂಗಾಲಾದ ರೈತರು!
