Saturday, October 11, 2025

CINE | ಕಾಂತಾರ ಓಟಕ್ಕಿಲ್ಲ ಬ್ರೇಕ್‌, 1 ವಾರಕ್ಕೆ 509 ಕೋಟಿ ಕಲೆಕ್ಷನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಮ್ಮ ಕನ್ನಡದ ಹೆಮ್ಮೆಯ ಸಿನಿಮಾ ಕಾಂತಾರ ಚಾಪ್ಟರ್‌ -1 ಓಟಕ್ಕೆ ಬ್ರೇಕ್‌ ಇಲ್ಲದಂತಾಗಿದೆ. ದೊಡ್ಡ ದೊಡ್ಡ ಸಿನಿಮಾಗಳನ್ನು ಬಾಕ್ಸ್‌ ಆಫೀಸ್‌ನಲ್ಲಿ ಕಾಂತಾರ ನುಂಗಿ ಹಾಕಿದೆ.

ಬೇರೆ ಭಾಷೆಯ ಆಡಿಯನ್ಸ್‌ ಕೂಡ ಕನ್ನಡದ ಈ ಸಿನಿಮಾವನ್ನು ಕೊಂಡಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಾಂತಾರದ ಬಗ್ಗೆ ಮಾತು ನಿಂತೇ ಇಲ್ಲ. ಬಾಕ್ಸ್‌ ಆಫೀಸ್‌ನಲ್ಲಿಯೂ ದೊಡ್ಡ ಹಿಟ್‌ ಆಗಿರುವ ಕಾಂತಾರ ಕ್ರೇಝ್‌ ಇನ್ನೂ ಇಳಿದಿಲ್ಲ.

ಕ್ರೇಝ್‌ ಕಡಿಮೆಯಾದಮೇಲೆ ಸಿನಿಮಾಕ್ಕೆ ಹೋಗೋಣ ಎಂದು ಕಾಯುತ್ತಿರುವ ಜನರೂ ಇದ್ದಾರೆ. ಈಗಾಗಲೇ ಈ ಸಿನಿಮಾ ಕಮಾಯಿ ಐನೂರು ಕೋಟಿ ದಾಟಿದೆ. ಹೌದು, 1 ವಾರಕ್ಕೆ 509 ಕೋಟಿ ಕಲೆಕ್ಷನ್ ಮಾಡಿದ ಹೆಗ್ಗಳಿಕೆಗೆ ಕಾಂತಾರ ಪಾತ್ರವಾಗಿದೆ.

error: Content is protected !!