ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ದೀಪಿಕಾ ಪಡುಕೋಣೆ ಸಿನಿಮಾ ಒಪ್ಪಿಕೊಳ್ಳುವ ಮೊದಲು ಒಂದಿಷ್ಟು ರೂಲ್ಸ್ ಹಾಕಿದ್ದಾರೆ ಅಂದೆಲ್ಲ ಸುದ್ದಿ ಆಗಿತ್ತು. ದೀಪಿಕಾ ದಿನದಲ್ಲಿ 8 ಗಂಟೆ ಮಾತ್ರ ಕೆಲಸ ಮಾತ್ರ ಮಾಡ್ತೇನೆ ಎಂದಿದ್ರು. ಇದೇ ಕಾರಣಕ್ಕೆ ದೀಪಿಕಾ ಪಡುಕೋಣೆಯನ್ನು ದಕ್ಷಿಣ ಭಾರತದ ಎರಡು ಸಿನಿಮಾಗಳಿಂದ ಕೈಬಿಡಲಾಗಿತ್ತು.
ಸಂದೀಪ್ ವಂಗಾ ರೆಡ್ಡಿಯ ಸ್ಪಿರಿಟ್ ಮತ್ತು ಪ್ರಭಾಸ್ ಅವರ ಕಲ್ಕಿ 2898 AD ಸಿನಿಮಾ ದೀಪಿಕಾ ಕೈ ಬಿಟ್ಟು ಹೋಗಿದೆ. ಎಂಟು ಗಂಟೆ ಮಾತ್ರ ಕೆಲಸ ಮಾಡ್ತೇನೆ ಎಂದಿದ್ದ ದೀಪಿಕಾ ಈಗ ತಮ್ಮ ಈ ಹೇಳಿಕೆ ಬಗ್ಗೆ ಮೌನ ಮುರಿದಿದ್ದಾರೆ. ಕೆಲ್ಸಕ್ಕೆ ಸಮಯ ನಿಗದಿಪಡಿಸಲು ಕಾರಣ ಏನು ಅನ್ನೋದನ್ನು ದೀಪಿಕಾ ಬಿಚ್ಚಿಟ್ಟಿದ್ದಾರೆ.
ನಮ್ಮ ಇಂಡಸ್ಟ್ರಿಯಲ್ಲಿ ಎಷ್ಟೋ ವರ್ಷಗಳಿಂದ ಮೇಲ್ ಆಕ್ಟರ್‌ಗಳು ಬರೀ ಎಂಟು ಗಂಟೆ ಕೆಲಸ ಮಾಡಿ ಮನೆಗೆ ಹೋಗಿದ್ದಾರೆ. ಇನ್ನು ಹಲವರು ವೀಕೆಂಡ್ ಕೆಲಸ ಮಾಡೋದಿಲ್ಲ. ಇದು ಎಷ್ಟೋ ವರ್ಷಗಳಿಂದ ನಡೆಯುತ್ತಿದೆ. ಆದರೆ ಇದರ ಬಗ್ಗೆ ಒಬ್ಬ ಫೀಮೇಲ್ ನಟಿ ಮಾತೆತ್ತಿದರೆ ಅದು ತಪ್ಪು ಹೇಗೆ? ಎಂದಿದ್ದಾರೆ.
ಇಂಡಿಯಾ ಫಿಲ್ಮ್ ಇಂಡಸ್ಟ್ರಿಯನ್ನು ಇಂಡಸ್ಟ್ರಿ ಅಂತ ಕರೆಯಲಾಗುತ್ತೆ. ಆದ್ರೆ ಅಲ್ಲಿ ಎಂದೂ ಆ ರೀತಿ ಕೆಲ್ಸವಾಗಿಲ್ಲ. ಇದು ತುಂಬಾ ಅಸ್ತವ್ಯಸ್ತವಾಗಿರುವ ಉದ್ಯಮ. ಇದನ್ನು ಸರಿದಾರಿಗೆ ತರುವ ಸಮಯ ಬಂದಿದೆ ಅಂತ ದೀಪಿಕಾ ಪಡುಕೋಣೆ ಹೇಳಿದ್ದಾರೆ. ಮಾತು ಮುಂದುವರೆಸಿದ ದೀಪಿಕಾ, ಇಂಡಸ್ಟ್ರಿಯಲ್ಲಿ ಈಗಾಗಲೇ ಅಮ್ಮನಾಗಿರುವ ಅನೇಕರು ಎಂಟು ಗಂಟೆ ಕೆಲ್ಸ ಮಾಡ್ತಾರೆ. ನನ್ನ ವಿಷ್ಯ ಮಾತ್ರ ಯಾಕೆ ವಿವಾದವಾಯ್ತು ಎಂದು ಪ್ರಶ್ನೆ ಮಾಡಿದ್ದಾರೆ.
ಕಡೆಗೂ ಎಂಟು ಗಂಟೆ ಕೆಲಸದ ಬಗ್ಗೆ ಮೌನ ಮುರಿದ ನಟಿ ದೀಪಿಕಾ ಪಡುಕೋಣೆ
