Sunday, October 19, 2025

ಕೆರಳಿಸುವ ಸುದ್ದಿ, ತಿರುಚಿದ ಅಭಿಪ್ರಾಯ ಮೂಡಿಸುವ ಫೋಟೋ ಆರೋಗ್ಯಕರವಲ್ಲ: ಪತ್ರಕರ್ತರಿಗೆ ಸಿಎಂ ಸಿದ್ದರಾಮಯ್ಯ ಸಲಹೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆರಳಿಸುವ ಸುದ್ದಿಗಳಿಂದ ಸಮಾಜಕ್ಕೆ ಪ್ರಯೋಜನವಿದೆಯೇ ಎಂದು ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಒಂದು ಛಾಯಾಚಿತ್ರ ಸಾವಿರ ಪದಗಳಿಗೆ ಸಮ. ಆದರೆ ತೆಗೆದ ಫೋಟೋಗಳನ್ನು ಬೇರೆ ಸಂದರ್ಭಗಳಲ್ಲಿ ಬಳಸಿ ತಿರುಚಿದ ಅಭಿಪ್ರಾಯ ಮೂಡಿಸುವುದು ಆರೋಗ್ಯಕರವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರಿನಲ್ಲಿ ಜಿಲ್ಲಾ ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಯ್ಕೆ ಆದ ಫೋಟೋ ಜರ್ನಲಿಸ್ಟ್‌ಗಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, ಪತ್ರಕರ್ತರು ಸತ್ಯ ಹೇಳ್ತಾರೆ ಎನ್ನುವ ನಂಬಿಕೆಯಿಂದ ನಿಮ್ಮನ್ನು ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಬ ಎಂದು ಕರೆಯುತ್ತಾರೆ. ಪತ್ರಕರ್ತರು ಸುಳ್ಳು ಹೇಳುವುದಿಲ್ಲ ಎನ್ನುವ ನಂಬಿಕೆ ಈಗಲೂ ಇದೆ. ಆದರೆ, ಊಹಾ ಪತ್ರಿಕೋದ್ಯಮ ವಿಪರೀತ ಆಗುತ್ತಿದೆ. ಊಹೆ ಮಾಡಿಕೊಂಡು ಸುದ್ದಿ ಮಾಡುವುದು ಗೌರವ ತರುವುದಿಲ್ಲ ಎಂದು ಅವರು ಹೇಳಿದರು.

ಪತ್ರಕರ್ತರು ಮೌಡ್ಯವನ್ನು ಬೆಂಬಲಿಸಬಾರದು. ಬಸವಣ್ಣನವರು ೧೨ನೇ ಶತಮಾನದಲ್ಲೇ ಮೌಡ್ಯದ ವಿರುದ್ಧ ಚಳವಳಿ ನಡೆಸಿದರು. ಆದರೆ ಇವತ್ತಿನ ಪತ್ರಕರ್ತರು ಮೌಡ್ಯದ ವಿರುದ್ಧ ಜನರನ್ನು ಎಚ್ಚರಿಸುವ ಕೆಲಸವನ್ನೇ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

error: Content is protected !!