ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಬದಲಾವಣೆ ಕುರಿತು ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಇತ್ತೀಚೆಗೆ ನೀಡಿದ ಹೇಳಿಕೆ ರಾಜ್ಯದಲ್ಲಿ ಮತ್ತೆ ಬಾರಿ ಸಂಚಲನ ಸೃಷ್ಟಿಸಿತ್ತು.
ಸಿಎಂ ಸಿದ್ದರಾಮಯ್ಯ 2028ರ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಸಿದ್ದರಾಮಯ್ಯ ಸ್ಥಾನ ತುಂಬಬಲ್ಲ ಶಕ್ತಿ ಸತೀಶ್ ಜಾರಕಿಹೊಳಿಗಿದೆ. ಸತೀಶ್ ಜಾರಕಿಹೊಳಿ ನಾಯಕರನ್ನು ಮುನ್ನಡಸಬೇಕು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಕುರಿತು ರಾಜ್ಯದೆಲ್ಲೆಡೆ ಚರ್ಚೆಯಾಗುತ್ತಿದೆ. ಇತ್ತ ಯತೀಂದ್ರ ಸಿದ್ದರಾಮಯ್ಯಗೆ ನೋಟಿಸ್ ಕೂಡ ನೀಡಲಾಗಿದೆ. ಇದೀಗ ಸಿದ್ದರಾಮಯ್ಯ ಈ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಸಿಎಂ ಹೇಳಿಕೆ ವಿಚಾರವನ್ನು ಯತೀಂದ್ರ ಬಳಿಯೇ ಕೇಳಿದ್ದೇನೆ. ಸೈದ್ಧಾಂತಿಕವಾಗಿ ಮಾತನಾಡಿದ್ದೇನೆ ಅಂದಿದ್ದಾರೆ. ಇಂತವರೇ ಮುಖ್ಯಮಂತ್ರಿ ಅಂತ ಹೇಳಿಲ್ಲ. ಹೇಳಿಕೆಯನ್ನು ತಿರುಚಿ ಬರೆಯಲಾಗಿದೆ ಎಂದಿದ್ದಾರೆ. ಇಂತವರೇ ಸಿಎಂ ಆಗಬೇಕು ಅಂತ ಹೇಳಿಲ್ಲ. ಇದೇ ವೇಳೆ ತಿರುಚಿ ಏನಾದ್ರೂ ಹೇಳಿದರಾ ಅಂತ ಕೇಳಿದೆ. ಇಲ್ಲ ನಾನು ಸೈದ್ದಾಂತಿಕವಾಗಿ ಮಾತನಾಡದ್ದು ಎಂದಿದ್ದಾರೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಳು ಪ್ರಶ್ನೆ ಮಾಡಿರುತ್ತಾರೆ, ಅದಕ್ಕೆ ಉತ್ತರಿಸಿದ್ದಾರೆ ಅಷ್ಟೇ, ಈಗ ನಾನು ಸಹಕಾರ ಸಪ್ತಾಹದ ಕುರಿತು ಮಾತನಾಡುತ್ತಿದ್ದೆ. ಈಗ ನೀವು ಯತೀಂದ್ರನ ಕುರಿತು ಕೇಳಲಿಲ್ಲವೇ? ಹೀಗೆ ಅಲ್ಲೂ ಕೇಳಿರುತ್ತಾರೆ. ಅದಕ್ಕೆ ಯತೀಂದ್ರ ಸಿದ್ದರಾಮಯ್ಯ ಉತ್ತರ ಕೊಟ್ಟಿರುತ್ತಾರೆ ಅಷ್ಟೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

