ಹೊಸದಿಗಂತ ಡಿಜಿಟಲ್ ಡೆಸ್ಕ್:
ನೆಲಮಂಗಲದ ಇಸ್ಲಾಂಪುರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಗುಂಡಿನ ದಾಳಿ ನಡೆದಿದೆ. ಗ್ರಾಮದಲ್ಲಿ ರೌಡಿಸಂ ತಣ್ಣಗಾಗಿದೆ ಎಂದುಕೊಂಡಾಗಲೇ ಮತ್ತೆ ಗನ್ ಸದ್ದು ಕೇಳಿಸಿದೆ.
ಕಣೇಗೌಡನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಸಲೀಂ ಅವರ ಮೇಲೆ ಗುಂಡಿನ ದಾಳಿಯಾಗಿದೆ. ಸಲೀಂ ಮನೆ ಮುಂದೆ ಬಂದ ಇಬ್ಬರು ವ್ಯಕ್ತಿಗಳಿಳು ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಎರಡು ಗುಂಪುಗಳ ನಡುವೆ ಮಾತನಾಡುವ ವೇಳೆ ಏಕಾಏಕಿ ಗುಂಡಿನ ದಾಳಿ ಮಾಡಿ ಅಪರಿಚಿತರು ಎಸ್ಕೇಪ್ ಆಗಿದ್ದಾರೆ. ಅವರ ಕೈಗೆ ಗಾಯವಾಗಿದ್ದು, ಇತ್ತ ಗಾಯಾಳು ಸಲೀಂ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗ್ತಿದೆ.
ಘಟನೆ ಬಗ್ಗೆ ಮಾತಾಡಿರುವ ಸಲೀಂ ಸಂಬಂಧಿ ಫಿರ್ದೋಸ್, ಇದು ರಾಜಕೀಯ ದುರುದ್ದೇಶದಿಂದ ಮಾಡಿರೋ ಕೃತ್ಯ. ಸಂಜೆ 6 ಗಂಟೆ ಸುಮಾರಿಗೆ ಸಲೀಂ ನಮಾಝ್ ಮುಗಿಸಿ ಅಂಗಡಿಯೊಂದರ ಮುಂದೆ ಕುಳಿತಿದ್ರು. ಆಗ ಗಾಡಿಯಲ್ಲಿ ಬಂದ ಒಬ್ಬ ಗುಂಡು ಹಾರಿಸಿದ್ದಾನೆ. ಗುಂಡು ಹಾರಿಸುವಾಗ ಮುಬಾರಕ್ ಪಾಷ ಕಡೆಯವನು ಎಂದು ಹೇಳಿ ಗುಂಡು ಹಾರಿಸಿದ್ದಾನೆ. ಬಳಿಕ ಗಾಡಿಯಲ್ಲಿ ಪರಾರಿಯಾಗಿದ್ದಾರೆ. ಅವರು ಯಾರು ಅನ್ನೋದು ಗೊತ್ತಿಲ್ಲ. ಇದು ರಾಜಕೀಯ ಉದ್ದೇಶದಿಂದ ಮಾಡಿರೋದು ಎಂದು ಆರೋಪಿಸಿದ್ದಾರೆ.
SHOCKING | ನೆಲಮಂಗಲದಲ್ಲಿ ಗ್ರಾಮ ಪಂಚಾಯತಿ ಸದಸ್ಯನ ಮೇಲೆ ಗುಂಡಿನ ದಾಳಿ!

