ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇದೀಗ ವಿವಾದದಲ್ಲಿ ಸಿಕ್ಕಿಕೊಂಡಿದ್ದಾರೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಸ್ಥಳೀಯ ನಿವಾಸಿ ಮನೋಜ್ ಎಂಬವರು ಅಧಿಕೃತ ದೂರು ದಾಖಲಿಸಿದ್ದಾರೆ. ದೂರುದಲ್ಲಿ ನಟ ಧ್ರುವ ಸರ್ಜಾ, ಅವರ ಮ್ಯಾನೇಜರ್, ಚಾಲಕ ಹಾಗೂ ಅಭಿಮಾನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಮನೋಜ್ ಮನೆ ಧ್ರುವ ಸರ್ಜಾ ನಿವಾಸದ ಬಳಿಯೇ ಇರುವುದರಿಂದ, ಪ್ರತಿದಿನ ನಟನ ಅಭಿಮಾನಿಗಳು ಮನೆ ಮುಂದೆ ಬೈಕ್‌ಗಳನ್ನು ಅಡ್ಡದಿಡ್ಡಿಯಾಗಿ ಪಾರ್ಕ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಪ್ರತಿದಿನ ಬರುವ ಜನರಿಂದ ಮನೆಗೆ ಬರುವುದು, ಹೋಗುವುದು ಕಷ್ಟವಾಗುತ್ತಿದೆ ಎಂದು ಮನೋಜ್ ದೂರಿನಲ್ಲಿ ಹೇಳಿದ್ದಾರೆ.
ಇಷ್ಟೇ ಅಲ್ಲದೆ, ಅಭಿಮಾನಿಗಳು ಮನೆಯ ಮುಂದೆ ಧೂಮಪಾನ ಮಾಡುತ್ತಾರೆ, ಗೋಡೆಯ ಮೇಲೆ ಉಗುಳುತ್ತಾರೆ ಎಂಬ ಅಸಹ್ಯಕರ ವರ್ತನೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲದರಿಂದ ಅಕ್ಕಪಕ್ಕದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನೋಜ್ ಹೇಳಿದ್ದಾರೆ.
ದೂರುನ್ವಯ, ಮನೋಜ್ ಅವರು ಧ್ರುವ ಸರ್ಜಾ ಹಾಗೂ ಅವರ ತಂಡದ ವಿರುದ್ಧ ಎಫ್‌ಐಆರ್ ದಾಖಲಿಸಲು ಒತ್ತಾಯ ಮಾಡಿದ್ದಾರೆ. ಆದರೆ ಪ್ರಸ್ತುತ ಬನಶಂಕರಿ ಪೊಲೀಸ್ ಠಾಣೆ ಅಧಿಕಾರಿಗಳು ಕೇವಲ NCR (Non-Cognizable Report) ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಇಲ್ಲಿಯವರೆಗೆ ನಟ ಧ್ರುವ ಸರ್ಜಾ ಅಥವಾ ಅವರ ತಂಡದಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

