ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ, ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಇದೀಗ ಹೊಸ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅವರನ್ನು ಬೆಂಗಳೂರಿನ ಆಟೋ ಚಾಲಕರ ಸಂಘದ ರಾಯಭಾರಿ ಆಗಿ ನೇಮಕ ಮಾಡಲಾಗಿದೆ. ಈ ಖುಷಿಯ ಸಂದರ್ಭದಲ್ಲಿ ರಚಿತಾ ರಾಮ್ ಅವರು ಸ್ವತಃ ಖಾಕಿ ಶರ್ಟ್ ಧರಿಸಿ ಆಟೋ ಚಲಾಯಿಸಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ನೂರಾರು ಆಟೋ ಚಾಲಕರು ಮತ್ತು ಹಲವು ಮಹಿಳಾ ಆಟೋ ಚಾಲಕಿಯರು ಆರ್.ಆರ್ ನಗರದಲ್ಲಿರುವ ರಚಿತಾ ರಾಮ್ ಅವರ ನಿವಾಸದ ಬಳಿ ಜಮಾಯಿಸಿ, ಅವರನ್ನು ಅಧಿಕೃತವಾಗಿ ರಾಯಭಾರಿಯನ್ನಾಗಿ ಸ್ವಾಗತಿಸಿದ್ದಾರೆ. ಆಟೋ ಚಾಲಕರ ವಸ್ತ್ರದಲ್ಲೇ ಆಟೋ ಮುಂದೆ ನಿಂತು ಪೋಸ್ ನೀಡಿದ ರಚಿತಾ, ಈ ವಿಶೇಷ ಕ್ಷಣಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.

ರಚಿತಾ ರಾಮ್ ಹೇಳಿಕೆ: “ಅತಿರಥ ಮಹಾರಥ ಸಾರಥಿಗಳಿಗೆ ನನ್ನ ಸಮಸ್ಕಾರ, ನನ್ನನ್ನು ಆಟೋ ಚಾಲಕರ ಸಂಘದ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿದ್ದಕ್ಕೆ ಧನ್ಯವಾದಗಳು.” ಎಂದು ಹೇಳಿದ್ದಾರೆ.
ಮಹಿಳಾ ಆಟೋ ಚಾಲಕಿಯರ ಜೊತೆ ತಾವೂ ಖಾಕಿ ಶರ್ಟ್ ಧರಿಸಿ ನಿಂತ ರಚಿತಾ ರಾಮ್ ಅವರ ಈ ನಡೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಇದೀಗ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಆಟೋ ಚಾಲಕ ಸಂಘದ ಹೊಸ “ಸಾರಥಿ” ಆಗಿ ಗುರುತಿಸಿಕೊಂಡಿದ್ದಾರೆ.

