Saturday, November 1, 2025

ಕಪ್ಪು ಪಟ್ಟಿಯೊಂದಿಗೆ ಕಣಕ್ಕಿಳಿದ ಭಾರತ-ಆಸ್ಟ್ರೇಲಿಯಾ ತಂಡ! ಹಿಂದಿರೋ ಕಾರಣವಾದ್ರು ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೆಲ್ಬರ್ನ್ ನ ಎಂಸಿಜಿ ಮೈದಾನದಲ್ಲಿ ನಡೆದ ಭಾರತ–ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟಿ20 ಪಂದ್ಯದಲ್ಲಿ ಒಂದು ಭಾವುಕ ಕ್ಷಣ ಕಂಡುಬಂದಿತು. ಭಾರತ ಮತ್ತು ಆಸ್ಟ್ರೇಲಿಯಾ ಆಟಗಾರರು ತಮ್ಮ ತೋಳಿನಲ್ಲಿ ಕಪ್ಪು ಪಟ್ಟಿಯನ್ನು ಧರಿಸಿ ಕಣಕ್ಕಿಳಿದರು.

ಪಂದ್ಯದ ಟಾಸ್ ವೇಳೆ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬ್ಲ್ಯಾಕ್ ಆರ್ಮ್‌ಬ್ಯಾಂಡ್ ಧರಿಸಿ ಕಾಣಿಸಿಕೊಂಡರು. ಬಳಿಕ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಸಹ ಕಪ್ಪು ಪಟ್ಟಿಯೊಂದಿಗೆ ಕಣಕ್ಕಿಳಿದರು. ಆಸ್ಟ್ರೇಲಿಯಾ ಆಟಗಾರರೂ ಕೂಡ ತಮ್ಮ ಜೆರ್ಸಿಯ ತೋಳಿನಲ್ಲಿ ಕಪ್ಪು ಪಟ್ಟಿಯನ್ನು ಧರಿಸಿದ್ದರು. ಎರಡೂ ತಂಡಗಳು ಈ ಮೂಲಕ ಕೇವಲ ಕ್ರೀಡಾ ಸ್ಪರ್ಧೆಯಲ್ಲ, ಮಾನವೀಯತೆಗೂ ಗೌರವ ಸಲ್ಲಿಸಿದವು.

ಈ ಕಪ್ಪು ಪಟ್ಟಿಯ ಹಿಂದಿನ ಕಥೆ ಅಕ್ಟೋಬರ್ 30 ರಂದು ನಡೆದ ಘಟನೆ. ಆಸ್ಟ್ರೇಲಿಯಾದ 17 ವರ್ಷದ ಪ್ರತಿಭಾವಂತ ಕ್ರಿಕೆಟಿಗ ಬೆನ್ ಆಸ್ಟಿನ್, ಮೆಲ್ಬೋರ್ನ್‌ನ ಈಸ್ಟಸ್‌ನಲ್ಲಿರುವ ಫರ್ನ್‌ಟ್ರೀ ಕ್ರಿಕೆಟ್ ಕ್ಲಬ್ ಪರ ಅಭ್ಯಾಸ ಮಾಡುತ್ತಿದ್ದ ವೇಳೆ ಬೌಲಿಂಗ್ ಯಂತ್ರದ ಮೂಲಕ ಅಭ್ಯಾಸ ಮಾಡುವಾಗ ಚೆಂಡು ಅವರ ಕುತ್ತಿಗೆ ಭಾಗಕ್ಕೆ ಬಡಿದು, ಪ್ರಜ್ಞಾಹೀನರಾದರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾದರೂ, ಎರಡು ದಿನಗಳ ಹೋರಾಟದ ನಂತರ ಅಕ್ಟೋಬರ್ 30ರಂದು ಅವರು ನಿಧನರಾದರು. ಬೆನ್ ಆಸ್ಟಿನ್ ಅವರ ಸ್ಮರಣಾರ್ಥವಾಗಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಅಕ್ಟೋಬರ್ 31ರಂದು ನಡೆದ ಟಿ20 ಪಂದ್ಯದಲ್ಲಿ ಕಪ್ಪು ಪಟ್ಟಿಯೊಂದಿಗೆ ಕಣಕ್ಕಿಳಿದವು.

error: Content is protected !!