ಹೊಸದಿಗಂತ ವರದಿ ವಿಜಯಪುರ:
ಕನ್ನಡ ರಾಜ್ಯೋತ್ಸವ ನಿಮಿತ್ತ ರಾಷ್ಟ್ರಧ್ವಜವನ್ನು ತಲೆ ಕೆಳಗಾಗಿ ಹಾರಿಸಿದ ಘಟನೆ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದಿದೆ.
ಇಲ್ಲಿನ ತಾಲೂಕಾಡಳಿತ ಆವರಣದಲ್ಲಿ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಿಮಿತ್ತ ತಲೆ ಕೆಳಗಾಗಿ ರಾಷ್ಟ್ರಧ್ವಜಾರೋಹಣ ಮಾಡಲಾಗಿದ್ದು, ಅತಿಥಿಗಳು ಕೂಡ ತಲೆ ಕೆಳಗಾದ ಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದ್ದಾರೆ.
ಆಗ ಕೆಲವರಿಗೆ ರಾಷ್ಟ್ರಧ್ವಜ ತಲೆ ಕೆಳಗಾಗಿ ಹಾರಿಸಿರುವುದು ಅರಿವಿಗೆ ಬಂದಿದ್ದು, ಬಳಿಕ ತತ್ ಕ್ಷಣ ಧ್ವಜವನ್ನು ಕೆಳಕ್ಕಿಳಿಸಲಾಗಿದೆ. ಈ ವೇಳೆ ರಾಷ್ಟ್ರಗೀತೆ ಮೊಳಗಿದೆ, ಆಗ ಸರಿಪಡಿಸಿ ಮತ್ತೆ ಧ್ವಜಾರೋಹಣ ಮಾಡಲಾಗಿದೆ.
ಈ ಅಚಾತುರ್ಯ ಘಟನೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

