ಹೊಸದಿಗಂತ ವರದಿ ಬೆಳಗಾವಿ :
ಕರ್ನಾಟಕ ರಾಜ್ಯೋತ್ಸವ ದಿನದಂದು ಪುಂಡ ಎಂಇಎಸ್ ಗೆ ಕರಾಳ ದಿನಕ್ಕೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅನುಮತಿ ನೀಡದಿದ್ದರೂ ಶನಿವಾರ ಎಂಇಎಸ್ ಮುಖಂಡರ ಹಗೂ ಕಾರ್ಯಕರ್ತರ ಸೇರಿ ಕರಾಳ ದಿನ ಆಚರಣೆ ಆಚರಣೆ ಮಾಡಿರುವುದರಿಂದ ಕನ್ನಡಿಗರನ್ನು ಕೆರಳಿಸುವಂತೆ ಮಾಡಿದೆ.
ನಗರದ ಹೃದಯ ಭಾಗದಲ್ಲಿರುವ ಚನ್ನಮ್ಮ ವೃತ್ತ ಸೇರಿದಂತೆ ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವ ಹಬ್ಬ ಸಂಭ್ರಮದಿಂದ ಆಚರಿಸುತ್ತಿದ್ದರೇ, ಇತ್ತ ಪುಂಡ ಎಂಇಎಸ್ ನಗರದಲ್ಲಿರುವ ಧರ್ಮವೀರ ಸಂಭಾಜಿ ಮೈದಾನದಲ್ಲಿ ಸೇರಿ ಅಲ್ಲಿಂದ ನಾಡದ್ರೋಹಿಗಳು ಸೇರಿ ಕರಾಳ ದಿನಾಚರಣೆಗೆ ಕಪ್ಪು ಬಟ್ಟೆ ಧರಿಸಿ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ್ ಹೋರ ಹಾಕಿದರು.
ಧರ್ಮವೀರ ಸಂಬಾಜಿ ಮೈದಾನದಿಂದ, ಬಾತಕಾಂಡೆ ನಗರ,ಪೋರ್ಟ್ ರೋಡ್,ಪಾಟೀಲ ಗಲ್ಲಿ ಸೇರಿ ಮರಾಠ ಮಂಗಲ ಕಾರ್ಯಾಲಯಕ್ಕೆ ತಲುಪಿ ರ್ಯಾಲಿ ಮುಕ್ತಾಯಗೊಳಿಸಿದರು. ಮಾಧವ್ ರೋಡ್, ಎಸ್ ಬಿ ಎಮ್ ರೋಡ್ ಹೇಮು ಕಲ್ಯಾಣಿ ಚೌಕ್,ಮುಜಾವರ್ ಗಲ್ಲಿ ಶನಿಮಂದಿರ ಬಳಸಿಕೊಂಡು ಬರುತ್ತಿರುವ ರ‌್ಯಾಲಿಯಲ್ಲಿ ಬೀದರ್ ಬಾಲ್ಕಿ ನಿಪ್ಪಾಣಿ ಬೆಳಗಾವಿ ನಮ್ಮದೆ ಎಂದು ಘೋಷಣೆ ಕೂಗುತ್ತಿರುವ ಪುಂಡರು ರಾಜ್ಯ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಮಹಾರಾಷ್ಟ್ರಕ್ಕೆ ಜೈಕಾರಿ ಹಾಕಿದರು.
ಜಿಲ್ಲಾಡಳಿತದ ಕರಾಳ ದಿನ ಆಚರಣೆಗೆ ಅನುಮತಿ ನೀಡದೆಇದ್ದರೂ ಕರಾಳ ದಿನ ಆಚರಣೆ ಮಾಡಿದ ಎಂಇಎಸ್ ಪುಂಡ ಮುಖಂಡರು ಸೇರಿ ಕರಾಳಾ ದಿನ ಆಚರಣೆ ರ್ಯಾಲಿ ನಡೆಸಿದರು.
ಬೆಗಾವಿಯಲ್ಲಿ ನಡೆತುತ್ತಿರುವ ಕರಾಳ ದಿನ ಆಚರಣೆಗೆ ಮಹಾರಾಷ್ಟ್ರ ನಾಯಕರು ಆಗಮಿಸುವ ನಿರೀಕ್ಷೆ ಇತ್ತು ಆದರೆ ಪೊಲೀಸ್ ಇಲಾಖೆ ಗಡಿಯಲ್ಲಿ ಪುಂಡರ ಪುಂಡಾಟಿಕೆಯನ್ನು ತಡೆದು, ವಾಪಸ್ ಕಳುಸಿದರು. ಇದರಿಂದಾಗಿ ನಗರದಲ್ಲಿರುವ ಎಂಇಎಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ವಿರುದ್ದ ಅಸಮಾಧಾನ ಹೋರ ಹಾಕಿ ಸರಕಾರಕ್ಕೆ ದಿಕ್ಕಾರ ಕೂಗಿ ಮಹಾರಾಷ್ಟ್ರದ ಪರ ಜೈಕಾರ ಹಾಕಲಾಯಿತು.
ಈ ಕರಾಳ ದಿನ ಆಚರಣೆಯಿಂದ ಕನ್ನಡಿಗರನ್ನು ಇನ್ನಷ್ಟು ಕೆರಳಿಸುವಂತೆ ಮಾಡಿದೆ.
ಅನುಮತಿ ನೀಡದೆ ಇದ್ದರು ಕರಾಳ ದಿನ ಆಚರಣೆ ಮಾಡಿದ ಎಂಇಎಸ್ ಪುಂಡರ ವಿರುದ್ದ ಕಾನೂನಿನ ಸುತ್ತ ಕ್ರಮ ಕೈಗೊಂಡು ಗಡಿ ಪಾರು ಮಾಡುವಂತೆ ಕನ್ನಡಪರ ಸಂಘಟನೆಗಳು ಒತ್ತಾಯಿಸುತ್ತಿವೆ.
ಕರಾಳ ದಿನ ಆಚರಣೆಗೆ ಅನುಮತಿ ನೀಡದಿದ್ದರೂ ಎಂಇಎಸ್ ಪುಂಡರಿಂದ ಆಚರಣೆ

