Sunday, December 21, 2025

ಎಂಇಎಸ್ ದುರುಳರ ಜೊತೆ ಕೈ ಜೋಡಿಸಿದ ಪೊಲೀಸ್ ಅಧಿಕಾರಿ

ಹೊಸದಿಗಂತ ವರದಿ ಬೆಳಗಾವಿ :

ಕರ್ನಾಟಕ ರಾಜ್ಯದ ಸಾಂಪ್ರದಾಯಿಕ ವಿರೋಧಿ ಪುಂಡ ಸಂಘಟನೆ ಎಂಇಎಸ್ ನಾಯಕನೊಂದಿಗೆ ಪೊಲೀಸ್ ಅಧಿಕಾರಿ‌ ನಗೆಬೀರಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಘಟನೆ‌ ನಗರದಲ್ಲಿ ನಡೆದಿದೆ.

ರಾಜ್ಯೋತ್ಸವ ಸಂಭ್ರಮಕ್ಕೆ ವಿರೋಧವಾಗಿ ನಡೆದ ಪುಂಡ ಎಂಇಎಸ್ ಕರಾಳ ಹೆಸರಿನ ರ‌್ಯಾಲಿಯಲ್ಲಿ ಬಂದೋಬಸ್ತ್ ಗೆ ನಿಯೋಜಿತಗೊಂಡಿದ್ದ ಪೊಲೀಸ್ ಅಧಿಕಾರಿ ಜೆ.‌ಎಂ. ಕಾಲಿಮಿರ್ಚಿ ಕನ್ನಡಿಗರ ಆಕ್ರೋಶಕ್ಕೆ, ರಾಜ್ಯ ಸರಕಾರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ರಾಜ್ಯೋತ್ಸವ ಮರವಣಿಗೆ ಬೆಳಗಾವಿಯಲ್ಲಿ ಶನಿವಾರ ಮೇರೆ ಮೀರಲಿರುವ ಮಧ್ಯೆ ಸಿಪಿಐ ಒಬ್ಬರ ದುರ್ವರ್ತನೆ ಜಿಲ್ಲಾಡಳಿತ ಹಾಗೂ ಪೊಲೀಸ್ ಕಮಿಷ್ನರ್ ಕೆಂಗಣ್ಣಿಗೆ ಗುರಿಯಾಗಿದೆ. ಸತತ ರಾಜ್ಯ ಸರಕಾರ ಹಾಗೂ ಕನ್ನಡಿಗರ ವಿರುದ್ಧ ಕತ್ತಿ ಮಸೆಯುವ ಎಂಇಎಸ್ ಮುಖಂಡ ಶುಭಂ ಸೆಳಕೆ ಜೊತೆಗೆ ಪೊಲೀಸ್ ಅಧಿಕಾರಿಯ ಅತಿ ಸಲುಗೆಯ ಸ್ನೇಹ ಸಾರ್ವಜನಿಕವಾಗಿ ಹೊರಬಿದ್ದಿದೆ. ಪೊಲೀಸ್ ಅಧಿಕಾರಿ ಜೆ. ಎಂ. ಕಾಲಿಮಿರ್ಚಿ ಅಮಾನತಿಗೆ ಕನ್ನಡಿಗರು ಆಗ್ರಹಿಸಿದ್ದಾರೆ.

error: Content is protected !!