ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಸಲ್ಮಾನ್ ಖಾನ್ ಅವರು ನಡೆಸಿಕೊಡುತ್ತಿರುವ ಹಿಂದಿ ‘ಬಿಗ್ ಬಾಸ್ 19′ ಪ್ರಸ್ತುತ ಸುದ್ದಿಯಲ್ಲಿದ್ದು, ಇದಕ್ಕೆ ಕಾರಣ ವಾರ ಎಲಿಮಿನೇಶನ್ ರೌಂಡ್‌ಗೂ ಮೊದಲೇ ಬಿಗ್ ಬಾಸ್ ಸ್ಪರ್ಧಿ ಮನೆಯಿಂದ ಹೊರಬಿದ್ದಿದ್ದಾರೆ.
ಹೌದು, ಬಿಗ್ ಬಾಸ್ 19’ ಕಾರ್ಯಕ್ರಮದ ಪ್ರಸಿದ್ಧ ಮತ್ತು ಬಲಿಷ್ಠ ಆಟಗಾರ ಪ್ರಣೀತ್ ಮೋರ್ ಎಲಿಮಿನೇಟ್ ಆಗಿದ್ದಾರೆ ಎಂಬ ಮಾಹಿತಿ ಹೊರಬರುತ್ತಿದೆ.
ಕಳೆದ ವೀಕೆಂಡ್ ಕಂತುಗಳಲ್ಲಿ, ಬಸೀರ್ ಅಲಿ ಮತ್ತು ನೆಹಲ್ ಚುಡಾಸಮಾ ಡಬಲ್ ಎವಿಕ್ಷನ್ ಪ್ರಕ್ರಿಯೆಯಲ್ಲಿ ಎಲಿಮಿನೇಟ್ ಆಗಿದ್ದರು. ಮತ್ತು ಈ ವಾರ, ಸೆಟ್‌ಗಳಿಂದ ಮತ್ತೊಬ್ಬ ಎವಿಕ್ಷನ್ ಹೆಸರು ಬಂದಿದೆ. ಇತ್ತೀಚಿನ ಅಪ್‌ಡೇಟ್ ಪ್ರಕಾರ, ಕ್ಯಾಪ್ಟನ್ ಪ್ರಣಿತ್ ಮೋರ್ ಅವರನ್ನು ಸಲ್ಮಾನ್ ಖಾನ್ ಕಾರ್ಯಕ್ರಮದಿಂದ ಹೊರಹಾಕಲಾಗಿದೆ.
ಆದ್ರೆ ಬಿಗ್ ಬಾಸ್ ತಕ್‌ನ ಎಕ್ಸ್ ಹ್ಯಾಂಡಲ್ ಪ್ರಕಾರ, “ಬ್ರೇಕಿಂಗ್! ಪ್ರಣೀತ್ ಮೋರ್ ಅವರನ್ನು ಬಿಗ್ ಬಾಸ್ 19 ಮನೆಯಿಂದ ಹೊರಹಾಕಲಾಗಿದೆ. ಆದಾಗ್ಯೂ, ಅವರನ್ನು ಸೀಕ್ರೆಟ್ ರೂಮ್‌ಗೆ ಸ್ಥಳಾಂತರಿಸಲಾಗಿದೆ ಎಂದು ಬರೆಯಲಾಗಿದೆ.
‘ಬಿಗ್ ಬಾಸ್ 19’ ಮನೆಯಲ್ಲಿ ಪ್ರಣೀತ್ ಅವರಿಗೆ ಡೆಂಗ್ಯೂ ಸೋಂಕು ತಗುಲಿದೆ. ಹೀಗಾಗಿ ನೇರವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.
ವೈದ್ಯರು ಪ್ರಣೀತ್ ಅವರಿಗೆ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಪ್ರಣೀತ್ ಅವರ ಆರೋಗ್ಯ ಸ್ಥಿರವಾಗಿಲ್ಲದ ಕಾರಣ, ಅಭಿಮಾನಿಗಳು ಕೂಡ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ, ಪ್ರಣೀತ್ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಪ್ರಣೀತ್ ಮೋರ್ ಅವರ ಹೊರಹೋಗುವಿಕೆಯ ಸ್ಪಷ್ಟ ಚಿತ್ರಣ ಭಾನುವಾರದ ವೀಕೆಂಡ್ ಕಾ ವಾರ್ ಸಂಚಿಕೆಯಲ್ಲಿ ಹೊರಬರಲಿದೆ.

