ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಬ್ಯಾನ್ ಮಾಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೇಶದಿಂದ ಆರ್ಎಸ್ಎಸ್ ಬ್ಯಾನ್ ಮಾಡಬೇಕು ಎಂದಿದ್ದಾರೆ. ಇದೀಗ ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕರಲ್ಲಿ ಆರ್ಎಸ್ಎಸ್ ಬ್ಯಾನ್ ಮಾಡುವ ಪೈಪೋಟಿ ಆರಂಭಗೊಂಡಿದೆ. ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಇದೀಗ ದೇಶದಲ್ಲಿ ಶಾಂತಿ ಕದಡುವ ಆರ್ಎಸ್ಎಸ್ ಸಂಘವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಬಿಕೆ ಹರಿಪ್ರಸಾದ್, ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರು. ಅವರು ದಾಖಲೆ ಇಟ್ಟು ಹೇಳಿದ್ದಾರೆ. ಸರ್ದಾರ್ ಪಟೇಲ್ ಸ್ಪಷ್ಟವಾಗಿ ಆರ್ಎಸ್ಎಸ್ ಬ್ಯಾನ್ ಬಗ್ಗೆ ಹೇಳಿದ್ದರು. ಮಹಾತ್ಮಾ ಗಾಂಧಿ ಹತ್ಯೆಯ ಬಳಿಕ ಪಟೇಲ್ ಬಹಳ ಸ್ಪಷ್ಟವಾಗಿ ಹೇಳಿದ್ದರು. ಇನ್ನು ಆರ್ಎಸ್ಎಸ್ ನಿಷೇಧ ಹಿಂಪಡೆಯಲು ಸಂಘದ ಚಟುವಟಿಕೆ, ಧ್ಯೇಯ, ಉದ್ದೇಶ, ಸಂವಿಧಾನ ನೀಡಬೇಕು ಎಂದಿದ್ದರು. ಆರ್ಎಸ್ಎಸ್ ತನ್ನ ಸಂವುಧಾನ ಕೊಟ್ಡ ಬಳಿಕವೂ ಅಂದಿನ ಸಂಪುಟ ಕೂಡ ತಿರಸ್ಕರಿಸಿತ್ತು ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಲ್ಲಿ ದ್ವಂದ್ವ ನೀತಿ ಇಲ್ಲ ಎಂದಿರುವ ಬಿಕೆ ಹರಿಪ್ರಸಾದ್, ಪ್ರಿಯಾಂಕ್ ಖರ್ಗೆ ಹೇಳಿರುವುದು ಸರ್ಕಾರ ಜಾಗದಲ್ಲಿ ಮಾಡುವಾಗ ಅನುಮತಿ ಪಡೆಯಬೇಕು ಎಂದಿದ್ದಾರೆ. ಸಿಂಧಗಿಯಲ್ಲಿ ಪಾಕ್ ಧ್ವಜ ಹಾರಿಸಿ ಕೋಮುಗಲಭೆ ಮಾಡಲು ಪ್ರಯತ್ನ ಆಯ್ತು. ಉಡುಪಿಯಲ್ಲಿ ಹಸು ಕೊಂದು ಕೋಮುಗಲಭೆ ಮಾಡಲು ಯತ್ನಿಸಿದರು. ಖರ್ಗೆ ಸಾಹೇಬ್ರು ಹೇಳಿರುವುದು ನೂರಕ್ಕೆ ನೂರು ಸತ್ಯ ಎಂದು ಹೇಳಿದ್ದಾರೆ.
ರಾಷ್ಟ್ರ, ರಾಜ್ಯದಲ್ಲಿ ಶಾಂತಿಕದಡುವ ಪ್ರಯತ್ನ ಮಾಡುವ ಈ ಸಂಘ ಮಾಡುತ್ತಿರುವುದರಿಂದ ಬ್ಯಾನ್ ಮಾಡಬೇಕು ಎಂದಿದ್ದಾರೆ. ಆರ್ ಎಸ್ ಎಸ್ ಒಪ್ಪಿಕೊಂಡವರು ಯಾರು ಕಾಂಗ್ರೆಸ್ ನಲ್ಲಿ ಇರಲು ಸಾಧ್ಯವಿಲ್ಲ. ಈಗಾಗಲೇ ರಾಹುಲ್ ಗಾಂಧಿ ಹೇಳಿದ್ದಾರೆ ಕಾಂಗ್ರೆಸ್ ನಲ್ಲಿರುವ ಸ್ಲಿಪರ್ ಸೆಲ್ ಗಳು ಹೊರಗಡೆ ಹಾಕಿ ಎಂದಿದ್ದಾರೆ. ಕಾಂಗ್ರೆಸ್ ನವರು ಆರ್ ಎಸ್ ಎಸ್ ಬಗ್ಗೆ ಮಾತಾಡಿಲ್ಲ ಎಂದಾಕ್ಷಣ ಅವರು ಆರ್ ಎಸ್ ಎಸ್ ಪರ ಎಂದು ಭಾವಿಸುವುದಲ್ಲ. ಆರ್ ಎಸ್ ಎಸ್ ಪರ ಇದ್ದವರಿಗೆ ಕಾಂಗ್ರೆಸ್ ನಲ್ಲಿ ಜಾಗ ಇಲ್ಲ. ರಾಹುಲ್ ಗಾಂಧಿ ಕೂಡ ಈ ಬಗ್ಗೆ ಹೇಳಿದ್ದಾರೆ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.

