Tuesday, January 13, 2026
Tuesday, January 13, 2026
spot_img

ದಿನಭವಿಷ್ಯ: ನಿಮ್ಮ ಬದುಕಿನ ಬಗ್ಗೆ ನೀವೇ ನಿರ್ಧಾರ ತೆಗೆದುಕೊಳ್ಳಿ, ಇತರರನ್ನು ಅವಲಂಬಿಸಬೇಡಿ

ಮೇಷ
ನಿಮ್ಮ ಬದುಕಿನ ಬಗ್ಗೆ  ಸರಿಯಾದ ನಿರ್ಧಾರ ತಾಳಬೇಕಾದವರು ನೀವೇ. ಇತರರನ್ನು ಅತಿಯಾಗಿ ಅವಲಂಬಿಸಬೇಡಿ. ಸ್ವಯಂ ನಿರ್ಣಯಿಸಿರಿ.  
ವೃಷಭ
 ಕ್ರಿಯಾಶೀಲತೆಯನ್ನು ಸರಿಯಾಗಿ ಬಳಸಿಕೊಳ್ಳಿ.ಉತ್ತಮ ಫಲ ಕಾಣುವಿರಿ.  ಇಂದು ಸಮಸ್ಯೆಗಳಿಲ್ಲದ ನಿರಾಳ ದಿನ. ಕುಟುಂಬಸ್ಥರ ಸಹಕಾರ.
ಮಿಥುನ
ಕನಸೆಲ್ಲವೂ ಒಂದೇ ಬಾರಿ ಈಡೇರದು ಎಂಬ ಅರಿವು ನಿಮಗಿರಲಿ. ಕಾಯುವ ತಾಳ್ಮೆ ಬೇಕು. ಜತೆಗೇ ಪ್ರಯತ್ನವೂ ಬೇಕು. ಆರೋಗ್ಯ ಸ್ಥಿರ.
ಕಟಕ
ಎಲ್ಲರನ್ನು ಕುರುಡಾಗಿ ನಂಬಬೇಡಿ.  ಯಾವುದೋ ವಿಷಯ ಚಿಂತೆಗೆ ಕಾರಣವಾಗುತ್ತದೆ. ಪ್ರೀತಿಯ ನಿವೇದನೆ ಫಲ ನೀಡದು.  
ಸಿಂಹ
ಫಲಪ್ರದ ದಿನ. ಯಾವುದೋ ಕಾರ್ಯ ಸಾಽಸಲು ಯೋಜಿಸಿದ್ದರೆ ಇಂದು ಕಾರ್ಯಗತ. ಸಾಂಸಾರಿಕ ಸಮಸ್ಯೆ ಪರಿಹಾರ ಕಾಣುವುದು.  
ಕನ್ಯಾ
ಗೊಂದಲಭರಿತ ಮನಸ್ಸು. ಸಮಸ್ಯೆಗಳು ಹೆಚ್ಚಿವೆ ಎಂಬ ದುಗುಡ. ಧಾರ್ಮಿಕ ವಿಚಾರದಲ್ಲಿ ಶಾಂತಿ ಕಂಡುಕೊಳ್ಳುವ ಪ್ರಯತ್ನ ನಿಮ್ಮದು.      
ತುಲಾ
ಬಿರುಸಿನ ವರ್ತನೆ ತೋರದಿರಿ, ಅದರಿಂದ ನೆಮ್ಮದಿ ಹಾಳು. ಪ್ರಮುಖ ವಿಷಯದಲ್ಲಿ ನಿಷ್ಕ್ರಿಯತೆ ಬಿಟ್ಟು ವರ್ತಿಸಿ. ಕೌಟುಂಬಿಕ ಅಸಹಕಾರ.
ವೃಶ್ಚಿಕ
ಕೆಲವು ವಿಷಯಗಳಿಗೆ ಆದ್ಯ ಗಮನ ಕೊಡಬೇಕು. ಅದನ್ನು ನಿರ್ಲಕ್ಷಿಸಬೇಡಿ. ಕೆಲಸದ ನಡುವೆ ಕುಟುಂಬ ಸದಸ್ಯರ ಹಿತಾಸಕ್ತಿಗೂ ಗಮನ ಕೊಡಿ.  
ಧನು
ಕೆಲ ಕಾರಣಗಳಿಂದ ನೀವಿಂದು ಭಾವುಕರಾಗಿ ವರ್ತಿಸುವಿರಿ. ಕೋಪವನ್ನು ನಿಯಂತ್ರಿಸಿ. ಕೌಟುಂಬಿಕ ವಿಷಯದಲ್ಲಿ ಆತುರದ ನಿರ್ಣಯ ತಾಳಬೇಡಿ.  
ಮಕರ
ಇತರರ ಒಳ್ಳೆ ಕೆಲಸ ಮೆಚ್ಚಿಕೊಳ್ಳಿ. ಅವರಿಂದ ಮುಂದಕ್ಕೆ ನಿಮಗೂ ಕಾರ್ಯವಾಗಲಿದೆ. ಸಾಂಸಾರಿಕ ಸಮಸ್ಯೆ ಬಗ್ಗೆ ಅತಿಯಾದ ಚಿಂತೆ ಬೇಡ.  
ಕುಂಭ
ಕೆಲವು ಘಟನೆಗಳು ನಿಮ್ಮ ವರ್ತನೆಯಲ್ಲಿ ಬದಲಾವಣೆ ತಂದೀತು. ಅದು ಬದುಕಿನ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಿ.
ಮೀನ
ಭಾವುಕರಾಗಿ ವರ್ತಿಸುವಿರಿ. ಆದರೆ ಇದು ನಿಮಗೆ ಪಾಸಿಟಿವ್ ಫಲಿತಾಂಶ ತರಲಿದೆ. ಆತ್ಮೀಯ ಸಂಬಂಧ ಗಾಢವಾಗಲಿದೆ.

Most Read

error: Content is protected !!