Wednesday, November 5, 2025

ದೇವರುಗಳ ಬಗ್ಗೆ ಕೆಟ್ಟ ಪೋಸ್ಟ್‌ ಮಾಡಿದ ಬಾಲಕಿ: ಪೋಷಕರು ಅರೆಸ್ಟ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಂದೂ ದೇವತೆಗಳು ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಬಾಲಕಿ ರೀಲ್ಸ್‌ ಪೋಸ್ಟ್‌ ಮಾಡಿದ್ದಕ್ಕೆ ಆಕೆಯ ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತೆಯನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದೆ

ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋವರ್ಸ್‌ ಹೆಚ್ಚಾಗಲೆಂದು ಬಾಲಕಿ ಈ ಅಪರಾಧ ಎಸಗಿದ್ದಾಳೆ. ಸುಮಾರು ಒಂದು ನಿಮಿಷದ ಈ ವಿಡಿಯೋವನ್ನು ಅ.27 ರಂದು ಬಾಲಕಿ ಪೋಸ್ಟ್ ಮಾಡಿದ್ದಳು.

ವೀಡಿಯೋದಲ್ಲಿ ಆಕೆ ಹಿಂದೂ ದೇವರನ್ನು ಟೀಕಿಸಿದ್ದಾಳೆ. ಸೋಷಿಯಲ್‌ ಮೀಡಿಯಾದಲ್ಲಿ ವೀಡಿಯೋ ವೈರಲ್‌ ಆಗಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು. ಈಕೆ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದರು. ಅನೇಕ ಹಿಂದೂ ಸಂಘಟನೆಗಳು ಬಾಲಕಿ ಮತ್ತು ಆಕೆಯ ಕುಟುಂಬದ ವಿರುದ್ಧ ಪ್ರತಿಭಟನೆ ನಡೆಸಿ ದೂರು ದಾಖಲಿಸಿದ್ದವು.

ದೂರನ್ನು ಆಧರಿಸಿ ಪೊಲೀಸರು ಬಾಲಕಿ ಮತ್ತು ಪೋಷಕರನ್ನು ಬಂಧಿಸಿದ್ದಾರೆ. ಅಪ್ರಾಪ್ತೆಯನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಿದ್ದಾರೆ. ಪ್ರಕರಣ ಸಂಬಂಧ ಮತ್ತೊಬ್ಬ ವ್ಯಕ್ತಿ ಪರಾರಿಯಾಗಿದ್ದು, ಆತನ ವಿರುದ್ಧವೂ ಪ್ರಕರಣ ದಾಖಲಾಗಿದೆ. 

ಬಾಲಕಿ ಹಿಂದೂ ದೇವತೆಗಳು ವಿರುದ್ಧ ಹೇಳಿಕೆ ನೀಡಿದ್ದಾಳೆ. ಆಕೆಯ ಪೋಷಕರಿಗೆ ಇದರ ಬಗ್ಗೆ ತಿಳಿದಿತ್ತು. ಇತರ ಕೆಲವರು ಇದರಲ್ಲಿ ಭಾಗಿಯಾಗಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಫಾಲೋವರ್ಸ್‌ ಹೆಚ್ಚಿಸಲು ಹುಡುಗಿ ಬಯಸಿದ್ದಳು. ನಾವು ಆಕೆಯ ಪೋಷಕರನ್ನು ಬಂಧಿಸಿದ್ದೇವೆ. ವೀಡಿಯೋವನ್ನು ವೈರಲ್ ಮಾಡಬೇಡಿ ಎಂದು ಜನತೆಗೆ ಮನವಿ ಮಾಡುತ್ತೇವೆ. ವೀಡಿಯೊವನ್ನು ಹಂಚಿಕೊಳ್ಳುವವರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!