ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಟನಲ್ ರೋಡ್ ವಿಚಾರ ಸಂಸದ ತೇಜಸ್ವಿ ಸೂರ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಜಟಾಪಟಿ ಜೋರಾಗಿದೆ.
ತೇಜಸ್ವಿ ಸೂರ್ಯ ಕೊಟ್ಟಿದ್ದ ಪ್ರಸ್ತಾವನೆಯನ್ನು ಡಿಕೆ ಶಿವಕುಮಾರ್ ಒಪ್ಪಿಲ್ಲ. ಹೀಗಾಗಿ ಇದೇ ವಿಚಾರ ಮತ್ತೆ ಇಬ್ಬರ ನಡುವೆ ಸಮರ ಸಾರುವಂತೆ ಮಾಡಿದ್ದು, ಬೆಂಗಳೂರಿನಲ್ಲಿ ಟನಲ್ ರಸ್ತೆ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಅವರು ಕೆಲ ಟೆಕ್ನಿಕಲ್ ಪ್ರಶ್ನೆಗಳ ಹಾಕಿದ್ದು, ಇವುಗಳಿಗೆ ಉತ್ತರ ಕೊಡಿ ಎಂದು ಡಿಕೆ ಶಿವಕುಮಾರ್ಗೆ ಸವಾಲು ಹಾಕಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಟೆಕ್ನಿಕಲ್ ವಿಚಾರಗಳ ಬಗ್ಗೆ ಡಿಕೆ ಶಿವಕುಮಾರ್ ಮಾತನಾಡಲ್ಲ . ವೈಯಕ್ತಿಕನಿಂದನೆ ಮಾಡುವ ಕೆಲಸ ಆಗುತ್ತಿದೆ. ಮದುವೆ ಆಗುತ್ತೇನೆಂದು ಕಾರು ಕೇಳಿಲ್ಲ. ಹಳೆಯ ಕಾರು ಒಂದು ಲಕ್ಷ ಕಿಲೋಮೀಟರ್ ಸಂಚಾರ ಮಾಡಿದೆ. ಆ ಕಾರಣಕ್ಕಾಗಿ ನಾನು ಹೊಸ ಕಾರು ಕೇಳಿದ್ದೆ. ಕಾರ್ ಗೆ ಎಲಿಜಿಬಿಟಿ ಮದುವೆ ವಿಚಾರ ಅಲ್ಲ. ಸಾಗರ್ ಖಂಡ್ರೆಯಂತ ಬ್ಯಾಚುಲರ್ ಗೆ ಕೂಡ ಕಾರು ಕೊಟ್ಟಿದ್ದಾರೆ. ಕಾನೂನು ಪ್ರಕಾರ ಕೊಡಲು ಅವಕಾಶ ಇದೆ ಎಂದು ತಿರುಗೇಟು ನೀಡಿದರು.
ಟನಲ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ನನ್ನ ಮೇಲೆ ವೈಯಕ್ತಿಕವಾಗಿ ಟೀಕೆ ಮಾಡ್ತಿದ್ದಾರೆ. ಅದು ಬಿಟ್ಟರೆ ನನ್ನ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿಲ್ಲ. ಟನಲ್ ರಸ್ತೆಯಲ್ಲಿ ಎರಡು ಹಾಗೂ ಮೂರು ಚಕ್ರದ ವಾಹನಗಳಿಗೆ ಅವಕಾಶ ಇಲ್ಲ. ಇದು ಯಾವ ರೀತಿ ನ್ಯಾಯ, ಅವರು ಟ್ಯಾಕ್ಸ್ ಕಟ್ಟಲ್ವ. ಶ್ರೀಮಂತರಿಗೆ ಮಾತ್ರ ಟನಲ್ ರೋಡ್ ನಾ ಎಂದು ಪ್ರಶ್ನಿಸಿದರು.
ಯಲ್ಲೋ ಲೈನ್ ನಲ್ಲಿ 37% ಟ್ರಾಫಿಕ್ ಕಡಿಮೆ ಆಗಿದೆ ಎಂದು ನೀವೇ ಹೇಳುತ್ತೀರಾ. ಹೀಗಿದ್ರು ಟನಲ್ ಗೆ ಯಾಕೆ ಬೆಂಬಲ ಕೊಡುತ್ತಿದ್ದೀರಾ?
ಡಿಪಿಆರ್ ಪ್ರಕಾರ ಮುಂದೆ ಈಗಿನ ಖರ್ಚಿಗಿಂತ 25% ಹೆಚ್ಚಳ ಆಗಲಿದೆ. ಕೇಂದ್ರ ಸರ್ಕಾರ ಅಟಲ್ ಟನಲ್ ಗೆ 9 ಕಿಮೀ 3200 ಕೋಟಿ ರೂ. ವೆಚ್ಚದಲ್ಲಿ ಮಾಡಿದ್ದಾರೆ. ಇಲ್ಲಿ ಯಾವ ಪರ್ವತ ಇದೆ. ಕಿ.ಮೀ ಗೆ 1050 ಕೋಟಿ ರೂ, ಖರ್ಚು ಮಾಡುತ್ತಿದ್ದೀರಿ. ಇಲ್ಲಿ ಯಾರ ವೈಯಕ್ತಿಕ ಟೀಕೆ ಇಲ್ಲ. ಇಲ್ಲಿ ಮದುವೆ, ಎಳಸು ಚರ್ಚೆ ಬದಲು ಈ ಪ್ರಶ್ನೆಗಳಿಗೆ ಉತ್ತರ ಕೊಡಿ. ಆದಷ್ಟು ಬೇಗ ಸಮಿತಿ ರಚನೆ ಮಾಡಲಿ ನಾನು ಅದಕ್ಕೆ ಕಾಯಿತ್ತಿದ್ದೇನೆ ಎಂದರು.
ಹೊಸ ಕಾರಿಗಾಗಿ ಅರ್ಜಿ ದಾಖಲೆ ರಿಲೀಸ್
ಇದೇ ವೇಳೆ ತೇಜಸ್ವಿ ಸುರ್ಯ ಅವರು ಹೊಸ ಕಾರಿಗಾಗಿ ಅರ್ಜಿ ಹಾಕಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡಿ ಡಿಕೆಶಿಗೆ ಟಾಂಗ್ ಕೊಟ್ಟಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಮದುವೆಯಾಗುವ ವೇಳೆಯಲ್ಲಿ ಹೊಸ ಕಾರು ಬೇಕೆಂದು ಅರ್ಜಿ ಹಾಕಿದ್ದು, ಅದರ ದಾಖಲೆ ಬಿಡುಗಡೆ ಮಾಡಿ ಎಂದರೆ ಬಿಡುಗಡೆ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಸಂಸದ ತೇಜಸ್ವಿ ಸೂರ್ಯ, ಕಾರು ಕೇಳಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡಿ ಡಿಕೆ ಶಿವಕುಮಾರ್ ಗೆ ತಿರುಗೇಟು ನೀಡಿದ್ದಾರೆ.

