ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಂಬಾಳೆ ಫಿಲ್ಮ್ಸ್‌ನ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಸಾಧನೆ ಮಾಡಿದೆ. ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವೆಂಬ ಪಟ್ಟವನ್ನು ತನ್ನದಾಗಿಸಿಕೊಂಡಿರುವ ಈ ಸಿನಿಮಾ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಏಕೆಂದರೆ, ಬಿಡುಗಡೆಯಾದ ನಾಲ್ಕು ವಾರಗಳಲ್ಲೇ ಸಿನಿಮಾ ಒಟಿಟಿ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗಿ ಪ್ರಾರಂಭವಾಗಿದೆ. ಆದರೂ ಚಿತ್ರಮಂದಿರಗಳಲ್ಲಿ ‘ಕಾಂತಾರ’ ಸದ್ದು ಕಡಿಮೆಯಾಗಿಲ್ಲ!
ಅಕ್ಟೋಬರ್ 30ರ ಮಧ್ಯರಾತ್ರಿಯಿಂದಲೇ ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆಗತೊಡಗಿತು. ಬಿಡುಗಡೆಯಾದ ತಕ್ಷಣವೇ ಚಿತ್ರಮಂದಿರಗಳಿಂದ ಎತ್ತಂಗಡಿ ಆಗಲಿದೆ ಎಂಬ ಮಾತು ಹರಡಿತ್ತು. ಆದರೆ ಅದು ತಪ್ಪು ಎಂದು ಬಾಕ್ಸ್ ಆಫೀಸ್ ವರದಿ ತೋರಿಸಿದೆ — ಒಟಿಟಿಗೆ ಬಂದ ಮೇಲೂ ಕೇವಲ ನಾಲ್ಕು ದಿನಗಳಲ್ಲಿ 10 ಕೋಟಿ ರೂ. ಗಳಿಕೆ ಸಾಧಿಸಿದೆ!
ಅಕ್ಟೋಬರ್ 31: ₹1.85 ಕೋಟಿ, ನವೆಂಬರ್ 1: ₹3.60 ಕೋಟಿ, ನವೆಂಬರ್ 2: ₹3.65 ಕೋಟಿ, ನವೆಂಬರ್ 3: ₹1 ಕೋಟಿ ಆಗಿದೆ ಒಟ್ಟಾರೆ, ನಾಲ್ಕು ದಿನಗಳ ಕಲೆಕ್ಷನ್ ₹10 ಕೋಟಿ ದಾಟಿದೆ. ಇದರ ಪ್ರಮುಖ ಕಾರಣವೆಂದರೆ, ಈ ಸಿನಿಮಾದ ಹಿಂದಿ ವರ್ಷನ್ ಇನ್ನೂ ಒಟಿಟಿಯಲ್ಲಿ ಬಿಡುಗಡೆಯಾಗಿಲ್ಲ. ಅದನ್ನು ಇನ್ನೂ ಮೂರು ವಾರಗಳ ಬಳಿಕ ಸ್ಟ್ರೀಮಿಂಗ್ ಮಾಡುವ ಯೋಜನೆ ಇದೆ.

