Thursday, November 6, 2025

CINE | ‘ಡೆವಿಲ್’ನಲ್ಲಿದೆ ಗಿಲ್ಲಿಗೆ ಖಡಕ್ ರೋಲ್: ಹೊಸ ಅವತಾರದಲ್ಲಿ ಕಾಮಿಡಿ ಕಿಂಗ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ದಿ ಡೆವಿಲ್’ ಕುರಿತು ಅಭಿಮಾನಿಗಳ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಡಿಸೆಂಬರ್ 12ರಂದು ರಿಲೀಸ್ ಆಗಲಿರುವ ಈ ಸಿನಿಮಾ ಕುರಿತು ತಂಡವು ಪ್ರತಿ ಕಲಾವಿದರ ಪೋಸ್ಟರ್‌ಗಳನ್ನು ಒಂದಾದ ಮೇಲೊಂದು ಬಿಡುಗಡೆ ಮಾಡುತ್ತಾ ಕುತೂಹಲ ಹುಟ್ಟುಹಾಕುತ್ತಿದೆ. ಇತ್ತೀಚೆಗೆ, ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟನ ಪೋಸ್ಟರ್ ಬಿಡುಗಡೆಗೊಂಡಿದ್ದು, ಅಭಿಮಾನಿಗಳಲ್ಲಿ ಹೊಸ ಸಂಚಲನ ಮೂಡಿಸಿದೆ.

ಸಾಮಾನ್ಯವಾಗಿ ಕಾಮಿಡಿ ಪಾತ್ರಗಳಲ್ಲಿ ಜನರನ್ನು ನಗಿಸುತ್ತಾ ಬೆಸ್ಟ್ ಎಂಟರ್‌ಟೈನರ್ ಆಗಿ ಹೆಸರು ಮಾಡಿದ ಗಿಲ್ಲಿ, ಈ ಬಾರಿ ಸೀರಿಯಸ್ ಲುಕ್‌ನಲ್ಲಿ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿದ್ದಾರೆ. ಕತ್ತಲೆ ಬ್ಯಾಕ್‌ಗ್ರೌಂಡ್‌ನಲ್ಲಿ ತೀವ್ರ ಅಭಿವ್ಯಕ್ತಿ ಹೊಂದಿದ ಗಿಲ್ಲಿಯ ಪೋಸ್ಟರ್ ವೈರಲ್ ಆಗಿ ಹರಿದಾಡುತ್ತಿದೆ. ಪೋಸ್ಟರ್ ನೋಡಿದ ಅಭಿಮಾನಿಗಳು, “ನಮ್ಮ ಗಿಲ್ಲಿಗೆ ಇದು ಕರಿಯರ್‌ನ ಟರ್ನಿಂಗ್ ಪಾಯಿಂಟ್ ಆಗಲಿದೆ” ಎಂದು ಕಾಮೆಂಟ್ ಮಾಡಿದ್ದಾರೆ.

‘ದಿ ಡೆವಿಲ್’ ಚಿತ್ರವನ್ನು ಹೈ ಆಕ್ಷನ್ ಥ್ರಿಲ್ಲರ್ ಆಗಿ ನಿರ್ಮಿಸಲಾಗಿದ್ದು, ದರ್ಶನ್ ಅವರ ಇಂಟೆನ್ಸ್ ಲುಕ್ ಮತ್ತು ಆಕ್ಷನ್ ಸೀನ್‌ಗಳು ಈಗಾಗಲೇ ಚರ್ಚೆಗೆ ಕಾರಣವಾಗಿವೆ. ಟ್ರೈಲರ್ ಬಿಡುಗಡೆಯ ದಿನಾಂಕ ಇನ್ನೂ ಅಧಿಕೃತವಾಗದಿದ್ದರೂ, ಒಂದಾದ ಮೇಲೊಂದು ಪೋಸ್ಟರ್‌ಗಳು ಅಭಿಮಾನಿಗಳ ನಿರೀಕ್ಷೆಯನ್ನು ಗಗನಕ್ಕೇರಿಸುತ್ತಿವೆ.

error: Content is protected !!