ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಹಿರಿಯ ಶಾಸಕ,ಮಾಜಿ ಸಚಿವರಾಗಿದ ಎಚ್ ವೈ ಮೇಟಿ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಹಾಗೂ ಕುರುಬ ಸಮಾಜದ ಸಂಪ್ರದಾಯದಂತೆ ನೆರವೇರಿತು. ಸಿಎಂ ಸಿದ್ದರಾಮಯ್ಯ ಹಾಗೂ ಅನೇಕ ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಎಚ್ ವೈ ಮೇಟಿ ಅವರು ಅನಾರೋಗ್ಯದಿಂದ ನಿನ್ನೆ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಸಾವನಪ್ಪಿದ್ದರು. ಇಂದು ಹುಟ್ಟೂರಾದ ಬಾಗಲಕೋಟೆ ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿತು.

ಅಂತ್ಯಕ್ರಿಯೆ ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿ, ಎಚ್ ವೈ ಮೇಟಿಗೆ ಇನ್ನೊಂದು ಹೆಸರೇ ನಿಷ್ಠಾವಂತ. ಮೇಟಿ ನನ್ನ ಜೊತೆಗೆ ಹೆಚ್ಚು ಮಾತನಾಡುತ್ತಿರಲಿಲ್ಲ ಎದುರು ಕೂಡುತ್ತಿರಲಿಲ್ಲ. ಆದರೆ ನನ್ನ ನಿರ್ಧಾರಕ್ಕೆ ಯಾವಾಗಲೂ ಬದ್ಧರಾಗಿರುತ್ತಿದ್ದರು ನಾನು ಏನೇ ತೀರ್ಮಾನ ಮಾಡಿದರು ಅದಕ್ಕೆ ಅವರು ಬದ್ಧರಾಗಿರುತ್ತಿದ್ದರು. ನಾನು ಕಾಂಗ್ರೆಸ್ ಸೇರಿದಾಗ ಮೇಟಿ ಕೂಡ ಕಾಂಗ್ರೆಸ್ ಸೇರಿದರು. ನಾನು ಹೆಚ್ ವೈ ಮೇಟಿ ಅವರಿಗಿಂತ ಒಂದು ವರ್ಷ ಚಿಕ್ಕವನು ಆದರೆ ನನ್ನನ್ನು ಅವರು ಹಿರಿಯನಂತೆ ಕಾಣುತ್ತಿದ್ದರು ಅಧಿಕಾರ ಇದ್ದರೂ ಅಹಂ ಇರಲಿಲ್ಲ ಅಧಿಕಾರ ಶಾಶ್ವತ ಇಲ್ಲ ಎಂದು ತಿಳಿಸಿದರು.

