ಹೊಸ ದಿಗಂತ ಡಿಜಿಟಲ್ ಡೆಸ್ಕ್
ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಗೆ ಈಗಾಗಲೇ ಕೃಷ್ಣಮೃಗ ಪ್ರಕರಣದಿಂದ ಸಲ್ಮಾನ್ ಖಾನ್‌ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸತತ ಬೆದರಿಕೆ ಹಾಕುತ್ತಿದೆ. ಇದರ ನಡುವೆ ಬಿಗ್ ಬಾಸ್ ನಿರೂಪಣೆ ಮಾಡುತ್ತಿರುವ ಸಲ್ಮಾನ್ ಖಾನ್‌ಗೆ ಇದೀಗ ಹೊಸ ಕಾನೂನು ಸಂಕಷ್ಟ ಎದುರಾಗಿದೆ.
ಸಲ್ಮಾನ್ ಖಾನ್‌ಗೆ ಕೋಟಾ ಗ್ರಾಹಕರ ಕೋರ್ಟ್‌ನಿಂದ ಲೀಗಲ್ ನೊಟೀಸ್ ನೀಡಲಾಗಿದೆ. ಇದಕ್ಕೆ ಕಾರಣ ಸಲ್ಮಾನ್ ಖಾನ್ ಜಾಹೀರಾತು ಒಂದರಲ್ಲಿ ಕಾಣಿಸಿಕೊಂಡದ್ದಾರೆ. ಇದೇ ಜಾಹೀರಾತು ಸಲ್ಮಾನ್ ಖಾನ್‌ಗೆ ನೊಟೀಸ್ ತಂದಿಟ್ಟಿದೆ.
ರಾಜಸ್ಥಾನ ಬಿಜೆಪಿ ನಾಯಕ, ರಾಜಸ್ಥಾನ ಹೈಕೋರ್ಟ್ ವಕೀಲರಾದ ಮೋಹನ್ ಸಿಂಗ್ ಹೊನಿ ದೂರು ನೀಡಿದ್ದಾರೆ.
ಸಲ್ಮಾನ್ ಖಾನ್ ಎಲೈಚಿ ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿನಲ್ಲಿ ಸಲ್ಮಾನ್ ಖಾನ್ ಎಲೈಚಿ ಪಾನ್ ಮಸಾಲಾದಲ್ಲಿದೆ ಅತ್ಯಮ್ಯೂಲ್ಯ ಕೇಸರಿ ಇದೆ. ಮಸಾಲಾ ಸ್ವಾದದ ಜೊತೆ ಕೇಸರಿ ಕೇವಲ 5 ರೂಪಾಯಿಗೆ ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ. ಈ ಜಾಹೀರಾತನ್ನು ಸಲ್ಮಾನ್ ಖಾನ್ ಪ್ರಮೋಶನ್ ಮಾಡುತ್ತಿದ್ದಾರೆ.
ದೂರಿನಲ್ಲಿ ಮೋಹನ್ ಸಿಂಗ್ ಹಲವು ವಿಚಾರ ಉಲ್ಲೇಖಿಸಿದ್ದಾರೆ. ಈ ಪೈಕಿ 1 ಕೆಜಿಗೆ 4 ಲಕ್ಷ ರೂಪಾಯಿ ಬೆಲೆ ಇದೆ. 5 ರೂಪಾಯಿ ಪ್ಯಾಕೆಟ್‌ನಲ್ಲಿ ಕೇಸರಿ ಹಾಕಿ ಕೊಡುತ್ತಿದ್ದಾರೆ ಎಂದು ಜಾಹೀರಾತಿನಲ್ಲಿ ಹೇಳಿದ್ದಾರೆ. 5 ರೂಪಾಯಿ ಪಾನ್ ಮಸಾಲದಲ್ಲಿ ಕೇಸರಿ ಹಾಕಲು ಅಸಾಧ್ಯ. ಇದು ಜನರನ್ನು ತಪ್ಪುದಾರಿಗೆ ಎಳೆಯತ್ತಿದೆ ಎಂದು ದೂರು ನೀಡಿದ್ದಾರೆ.
ಸಲ್ಮಾನ್ ಖಾನ್ ರೋಲ್ ಮಾಡೆಲ್. ಸಿನಿಮಾದಲ್ಲಿ ನಾಯಕನಾಗಿ ಹಲವು ಪಾತ್ರ ನಿಭಾಯಿಸಿದ್ದಾರೆ. ಮಾದರಿಯಾಗಿದ್ದಾರೆ. ಹೀಗಾಗಿ ಸಲ್ಮಾನ್ ಖಾನ್ ಮಾತು ನಂಬಿ ಜನರು ಮೋಸ ಹೋಗುತ್ತಿದ್ದಾರೆ. ಸಲ್ಮಾನ್ ಖಾನ್ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಹೀಗಾಗಿ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಮೋಹನ್ ಸಿಂಗ್ ಮನವಿ ಮಾಡಿದ್ದಾರೆ.

