ಹೊಸ ದಿಗಂತ ಡಿಜಿಟಲ್ ಡೆಸ್ಕ್
ಅಂಗಡಿಯಿಂದ ಖರೀದಿಸಿದ ಜಂಕ್ ಫುಡ್ ಪೊಟ್ಟಣದಲ್ಲಿ ಸುಟ್ಟು ಕರಕಲಾದ ಸಣ್ಣ ಹಾವಿನ ರೀತಿಯ ವಸ್ತು ಪತ್ತೆಯಾದ ಘಟನೆ ಮುಂಡಾಜೆಯ ಸೋಮಂತಡ್ಕ ಪರಿಸರದಲ್ಲಿ ನಡೆದಿದೆ.
ಮದರಸದಿಂದ ವಾಪಸಾಗುತ್ತಿದ್ದ ವೇಳೆ ಮಕ್ಕಳು ಸ್ಥಳೀಯ ಅಂಗಡಿಯಿಂದ ಜಂಕ್ ಫುಡ್ ಪ್ಯಾಕೆಟ್ ಖರೀದಿಸಿ ತಿನ್ನುವ ವೇಳೆ ಇದು ಪತ್ತೆಯಾಗಿದೆ.ಈ ವಿಚಾರವನ್ನು ಮಕ್ಕಳು ತಕ್ಷಣ ಮನೆಯವರಿಗೆ ತಿಳಿಸಿದ್ದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷಿಸಲಾಗಿದೆ ಹಾಗೂ ಅವರು ಆರೋಗ್ಯವಾಗಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ.
ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಮನೆಯವರು ಸಂಬಂಧಪಟ್ಟ ಇಲಾಖೆಗೆ ಇದುವರೆಗೆ ಯಾವುದೇ ದೂರು ನೀಡಿಲ್ಲ ಎಂದು ತಿಳಿದುಬಂದಿದೆ.


