Friday, November 7, 2025

ಮೊದಲು ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಿ: ಸಚಿವ ಚಲುವರಾಯ ಸ್ವಾಮಿ

ಹೊಸದಿಗಂತ ವರದಿ ಶಿವಮೊಗ್ಗ:

ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಕೇಂದ್ರ ಸರ್ಕಾರದ ಐವರು ಮಂತ್ರಿಗಳು ಮತ್ತು ರಾಜ್ಯ ಸಚಿವರು ಕುಳಿತು ಬಗೆಹರಿಸಬೇಕು. ಇದನ್ನು ಬಿಟ್ಟು ಸುಳ್ಳು ಹೇಳಿಕೊಂಡು ಕೇಂದ್ರ ಸಚಿವರು ಮತ್ತು ಸಂಸದರು  ಓಡಾಡುತ್ತಿದ್ದಾರೆ ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ಆರೋಪಿಸಿದ್ದಾರೆ.

ನವುಲೆ ಕೃಷಿ ಮೇಳದ ಆವರಣದಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿ, ಬೆಳಗಾವಿಯ ಕರ್ಲಾಪುರದಲ್ಲಿ ಕಬ್ಬು ಬೆಳಗಾರರ ಬೆಳೆ ನಿಗದಿಗಾಗಿ ಪ್ರತಿಭಟನೆ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದ ಜವಬ್ದಾರಿ ಇದೆ. ಸಚಿವರು ರೈತರ ಜೊತೆ ಮಾತನಾಡಿದ್ದಾರೆ. ಮುಖ್ಯಮಂತ್ರಿಗಳು ಸಹ ರೈತರ ಜೊತೆ ಮಾತನಾಡುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಎಲ್ಲಾ ದಾಖಲಾತಿಗಳನ್ನ ರವಾನಿಸಲಾಗಿದೆ ಎಂದರು.

ಕನಿಷ ್ಪ ಬೆಂಬಲ ಬೆಲೆ ಮತ್ತು ಎಫ್ಪಿಎಆರ್‌ನ್ನ ಕೇಂದ್ರ ನಿಗದಿ ಪಡಿಸಬೇಕಿದೆ. ಮಾಹಾರಾಷ್ಟ್ರದಲ್ಪಿ ಬೆಳೆಹಾನಿಗೆ ಹೆಚ್ಚಿನ ದರ ನಿಗದಿ ಮಾಡಲಾಗಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ಕೊಟ್ಟಿಲ್ಲ. ತಾರತಮ್ಯ ಮಾಡಲಾಗಿದೆ. ರಾಜ್ಯದ 27 ಜನ ಎಂಪಿಗಳು, ಕೇಂದ್ರ ಸಚಿವರು ಇದರ ಬಗ್ಗೆ ಮಾತನಾಡಬೇಕು ಎಂದರು.

error: Content is protected !!