Monday, November 10, 2025

ಪೀರಿಯಡ್ಸ್‌ ನೋವು ಹೇಗಿರುತ್ತದೆ ಎಂದು ಗಂಡಸರಿಗೂ ಗೊತ್ತಾಗ್ಲೇಬೇಕು ಎಂದ ರಶ್ಮಿಕಾ ಮಂದಣ್ಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ರಶ್ಮಿಕಾ ಮಂದಣ್ಣ ದಿ ಗರ್ಲ್‌ಫ್ರೆಂಡ್‌ ಸಿನಿಮಾ ಹಿಟ್‌ ಆಗಿದೆ. ಇದೀಗ ನಟಿ ಪ್ರಮೋಷನ್‌ ವಿಡಿಯೋ ವೇಳೆ ಹೇಳಿದ ಮಾತೊಂದು ಎಲ್ಲೆಡೆ ವೈರಲ್‌ ಆಗ್ತಿದೆ.

ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರು ಜೀ ತೆಲುಗಿನ ಶೋನಲ್ಲಿ ಭಾಗಿ ಆದರು. ಈ ಶೋನ ತೆಲುಗಿನಲ್ಲಿ ವಿಲನ್ ಪಾತ್ರಗಳನ್ನು ಮಾಡುವ ಜಗಪತಿ ಬಾಬು ನಡೆಸಿಕೊಟ್ಟಿದ್ದಾರೆ. ಯಾವುದೋ ವಿಷಯ ಮಾತನಾಡುವಾಗ ಗಂಡುಮಕ್ಕಳಿಗೂ ಪೀರಿಯಡ್ಸ್ ಆಗಿದ್ರೆ ಚೆನ್ನಾಗಿರುತ್ತಿತ್ತು ಎಂದು ಅನಿಸಿದೆಯೇ ಎಂದು ಜಗಪತಿ ಬಾಬು ಅವರು ರಶ್ಮಿಕಾಗೆ ಕೇಳಿದ್ದಾರೆ.

ಹೌದು, ಋತುಚಕ್ರದ ನೋವು ಹೇಗೆ ಇರುತ್ತದೆ ಎಂಬುದು ಗೊತ್ತಾಗಬೇಕು ಎಂದರೆ ಗಂಡುಮಕ್ಕಳಿಗೆ ಒಮ್ಮೆ ಋತುಚಕ್ರ ಸಂಭವಿಸಬೇಕು ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಈ ಹೇಳಿಕೆ ವೇಳೆ ಎಲ್ಲರೂ ಜೋರಾಗಿ ನಕ್ಕಿದ್ದು, ಹೆಣ್ಣುಮಕ್ಕಳಿಗೆ ಖುಷಿಯಂತೂ ಆಗಿದೆ.

ಕೆಲವೆಡೆ ಹೇಳಿಕೆಗೆ ವಿರೋಧ ಕೂಡ ವ್ಯಕ್ತವಾಗಿದೆ. ಗಂಡುಮಕ್ಕಳಿಗೂ ಸಾವಿರ ಸ್ಟ್ರೆಸ್‌ ಇದೆ, ನಮ್ಮ ಹೆಗಲ ಮೇಲೆ ಜವಾಬ್ದಾರಿ ಭಾರ ಇದೆ, ಪೀರಿಯಡ್ಸ್‌ ನೋವು ಬೇರೆ ಕೊಡೋಕೆ ಹೊರಟಿದ್ದೀರಿ ಎಂದಿದ್ದಾರೆ.

error: Content is protected !!