ಹೊಸದಿಗಂತ ವರದಿ ಸೋಮವಾರಪೇಟೆ:
ರೈತರ ಭೂಮಿಯ ಪೋಡಿ, ಹಾಗೂ ದುರಸ್ತಿ ಬೇಡಿಕೆ ಒತ್ತಾಯಿಸಿ ರೈತರು ವಿಷದ ಬಾಟಲಿ ಹಿಡಿದು ಪ್ರತಿಭಟನೆ ನಡೆಸುತ್ತಿರುವ ಘಟನೆ ತಾಲೂಕು ಕಚೇರಿಯ ಮುಂದೆ ನಡೆಯುತ್ತಿದೆ.
ತಾಲೂಕಿನ ವಿವಿಧ ಭಾಗಗಳಲ್ಲಿ ರೈತರ ಜಮೀನುಗಳು ಪೋಡಿ ಹಾಗೂ ದುರಸ್ತಿಯಾಗದೆ ಸಮಸ್ಯೆಯಾಗುತ್ತಿದೆ. ಅರ್ಜಿ ಸಲ್ಲಿಸಿ ಹಲವು ವರ್ಷಗಳಾಗಿದ್ದರೂ ಇನ್ನೂ ಸಮಸ್ಯೆ ಪರಿಹಾರವಾಗಿಲ್ಲ ಪ್ರತಿನಿತ್ಯ ರೈತರು ತಾಲೂಕು ಕಚೇರಿಗೆ ಅಲೆದು,ಅಲೆದು ಸುಸ್ತಾಗಿದ್ದಾರೆ ಎಂದು ಆರೋಪಿಸಿರುವ ರೈತರು ಸಂಜೆ 5ಗಂಟೆಯ ಒಳಗೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಪರಿಹರಿಸದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಷದ ಬಾಟಲ್ ಹಿಡಿದು ಧರಣಿ ಕುಳಿತಿದ್ದಾರೆ. ತಹಶೀಲ್ದಾರ್ ಕೃಷ್ಣಮೂರ್ತಿಯವರು ಧರಣಿ ನಿರತರ ಮನವೊಲಿಸುವ ಪ್ರಯತ್ನ ಫಲ ನೀಡಲಿಲ್ಲ.
ಪೋಡಿ, ಹಾಗೂ ದುರಸ್ತಿ ಬೇಡಿಕೆಗೆ ಒತ್ತಾಯ: ವಿಷದ ಬಾಟಲಿ ಹಿಡಿದು ಅನ್ನದಾತರ ಪ್ರತಿಭಟನೆ

