Monday, November 10, 2025

ಹಬ್ಬದ ಸಮಯ ಹಿಂದುಗಳು ಬಾರ್ ನಲ್ಲಿ ಇರುತ್ತಾರೆ: ಮಾಜಿ ಸಚಿವ ಆಂಜನೇಯ ಹೊಸ ವಿವಾದ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಬ್ಬದ ಸಮಯ ಹಿಂದುಗಳು ಬಾರ್ ನಲ್ಲಿ ಇರುತ್ತಾರೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರು ಏರ್ ಪೋರ್ಟ್ ನಲ್ಲಿ ನಮಾಜ್ ಮಾಡಿರೋದನ್ನು ಸಮರ್ಥಿಸಿಕೊಳ್ಳೋ ಭರದಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ , ಮುಸ್ಲೀಮರು ಮಾಡಿದ್ದು ಪ್ರಾರ್ಥನೆ, ಕೋಲು ಹಿಡಿದುಕೊಂಡು ಹೋಗಲ್ಲ. ಅವರಲ್ಲಿರೋ ಶ್ರದ್ಧೆಯನ್ನು ನೋಡಿ ನೀವೆಲ್ಲರೂ ಕಲಿತುಕೊಳ್ಳಿ ಎಂಬುದಾಗಿ ತಿಳಿಸಿದರು.

ಮುಸ್ಲಿಮರು ಮೂರ್ಖರಲ್ಲ. ಮಸೀದಿ ಇಲ್ಲ ಅಂತ ಹೇಳಿ ಅಲ್ಲಿ ನಮಾಜ್ ಮಾಡಿರಬಹುದು. ಅದರಲ್ಲೂ ನಾವು ಸಣ್ಣತನ ತೋರಿಸಿದ್ರೆ ಹೇಗೆ ಎಂಬುದಾಗಿ ಪ್ರಶ್ನಿಸಿದರು.

ಗಣೇಶ ಹಬ್ಬದಲ್ಲಿ ಬಾರ್ ಗಳು ಪುಲ್ ರಶ್ ಇರುತ್ತವೆ. ಹಬ್ಬದಲ್ಲಿ ಹೂ, ಹಣ್ಣಿನ ವ್ಯಾಪಾರವೂ ಆಗಲ್ಲ. ಅದರ ಬದಲಾಗಿ ಹೈಕ್ಲಾಸ್ ಬಾರ್ ಅಂಡ್ ರೆಸ್ಟೋರೆಂಟ್ ಗಳು ಹೌಸ್ ಪುಲ್ ಆಗಿರುತ್ತವೆ ಎಂಬುದಾಗಿ ಹೇಳಿದ್ದಾರೆ.

error: Content is protected !!