ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾನುವಾರಗಳ ಮೇಲೆ ದಾಳಿ ಮಾಡುತ್ತಿದ್ದ 5 ವರ್ಷದ ಹೆಣ್ಣು ಹುಲಿ ಹಾಗೂ ಅದರ 3 ಮರಿಗಳನ್ನು ಸೆರೆ ಹಿಡಿದಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಕಲ್ಲಹಳ್ಳಿ ಬಳಿ ಮೂರು ಮರಿಗಳ ರಕ್ಷಣೆಯೊಂದಿಗೆ ಸೆರೆ ಹಿಡಿಯಲಾಗಿರುವ ಈ ಹೆಣ್ಣು ಹುಲಿ ವಸತಿ ಪ್ರದೇಶಗಳಿಗೆ ಬಂದು ಹಲವು ಜಾನುವಾರಗಳ ಮೇಲೆ ದಾಳಿ ಮಾಡಿತ್ತು ಎಂಬುದನ್ನು ಖಚಿತಪಡಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿದೆ ಎಂದು ಸಚಿವರು ವಿವರಿಸಿದರು.
ಪ್ರಸ್ತುತ ಸೆರೆ ಹಿಡಿಲಾದ ಹೆಣ್ಣು ಹುಲಿ ಮತ್ತು ರಕ್ಷಿಸಲಾದ ಮೂರು ಮರಿಗಳು ಪಶುವೈದ್ಯರ ನಿಗಾದಲ್ಲಿವೆ. ಕಾಡಿನ ಹೊರಗೆ ಸಂಚರಿಸುತ್ತಿರುವ ಹುಲಿಗಳ ಕಾರ್ಯಾಚರಣೆ ಮುಂದುವರಿದಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದ್ದಾರೆ.

