Tuesday, November 11, 2025

ದೆಹಲಿ ಕಾರು ಸ್ಪೋಟ ಪ್ರಕರಣ: ಹಂಪಿ ಸುತ್ತಮುತ್ತ ಕಟ್ಟೆಚ್ಚರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟ ಪ್ರಕರಣದಿಂದ ಇಡೀ ದೇಶವೇ ನಲುಗಿದ್ದು, ವಿಜಯನಗರ ಜಿಲ್ಲೆಯ ಹಂಪಿ, ತುಂಗಭದ್ರಾ ಜಲಾಶಯ ಸೇರಿದಂತೆ ವಿವಿಧೆಡೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ದೆಹಲಿಯ ಕೆಂಪು ಕೋಟೆ ಬಳಿ ಸ್ಟೋಟ , ಸಾವು ನೋವು ಪ್ರಕರಣ‌ ಸಂಭವಿಸಿದ ಹಿನ್ನೆಲೆಯಲ್ಲಿ ಪ್ರವಾಸಿ ತಾಣ ಹಂಪಿ ಮತ್ತು ತುಂಗಭದ್ರಾ ಜಲಾಶಯಕ್ಕೆ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.

ಘಟನೆ ಹಿನ್ನಲೆಯಲ್ಲಿ ಪೊಲೀಸ್ ಭದ್ರತೆ ಎಂದಿಗಿಂತ ಹೆಚ್ಚಳ ಮಾಡಿದ ಪೊಲೀಸ್ ಇಲಾಖೆ , ಬಾಂಬ್ ನಿಷ್ಕ್ರಿಯ ದಳ ಸೇರಿದಂತೆ ಪೊಲೀಸ್ ಅಧಿಕಾರಿಗಳ ತಂಡ ಪ್ರವಾಸಿ ತಾಣಗಳಲ್ಲಿ ಮೊಕ್ಕಾಂ ಹೂಡಿದೆ‌.

ಯಾವುದೇ ಅಹಿತಕರ ಘಟನೆ ನಡೆಯದಂತೆ, ಪೊಲೀಸರ ಗಸ್ತು ಕೂಡ ಹೆಚ್ಚಳ ಮಾಡಿದ ಪೊಲೀಸ್ ಇಲಾಖೆ ಐತಿಹಾಸಿಕ ಹಂಪಿ ಮತ್ತು ತುಂಗಭದ್ರಾ ಡ್ಯಾಂ ನಲ್ಲಿ ಭದ್ರತೆ ಹೆಚ್ಚಳ ಮಾಡಿದೆ.

error: Content is protected !!