Thursday, December 4, 2025

ರಾಮ-ರಹೀಮ್ ಒಂದೇ: ಮುಸ್ಲಿಮರು ಒಪ್ಪದಿರುವುದು ಜಗಳಕ್ಕೆ ಮೂಲ: ಸಿ.ಟಿ. ರವಿ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಂದು ಮತ್ತು ಮುಸ್ಲಿಂ ಧರ್ಮಗಳ ನಡುವಿನ ಸಾಮರಸ್ಯದ ಕೊರತೆ ಕುರಿತು ಎಂ.ಎಲ್.ಸಿ. ಸಿ.ಟಿ. ರವಿ ಅವರು ದತ್ತಪೀಠದಲ್ಲಿ ಮಾಧ್ಯಮಗಳ ಮುಂದೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಸ್ಲಿಮರು “ಈಶ್ವರ ಅಲ್ಹಾ ತೇರೇ ನಾಮ್” ಎಂಬ ಸಂದೇಶವನ್ನು ಅಳವಡಿಸಿಕೊಳ್ಳದಿರುವ ಬಗ್ಗೆ ಪ್ರಮುಖವಾಗಿ ಪ್ರಸ್ತಾಪಿಸಿದ ಅವರು, ಈ ಮೌಲ್ಯವನ್ನು ಮಸೀದಿ ಅಥವಾ ಮದ್ರಸಾಗಳಲ್ಲಿ ಕಲಿಸಿದ್ದರೆ ಭಯೋತ್ಪಾದಕರುಗಳೇ ಇರುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

“ಹಿಂದುಗಳು ‘ರಾಮ್ ಮತ್ತು ರಹೀಮ್ ಒಂದೇ’ ಎಂದು ಹೇಳುತ್ತಿದ್ದೇವೆ, ಆದರೆ ಮುಸ್ಲಿಮರು ಇದನ್ನು ಹೇಳುತ್ತಿಲ್ಲ. ರಾಮ್ ರಹೀಮ್ ಒಂದೇ ಎಂದು ಅವರು ಹೇಳಿಕೊಟ್ಟಿದ್ದರೆ ಇಂದು ಜಗಳಗಳೇ ಆಗುತ್ತಿರಲಿಲ್ಲ. ನಾವು ಅಲ್ಹಾ ದೇವರನ್ನು ಒಪ್ಪಿಕೊಳ್ಳಲು ಯಾವುದೇ ತೊಂದರೆ ಇಲ್ಲ, ನಮ್ಮ ಪರಂಪರೆ ಅದಕ್ಕೆ ಅವಕಾಶ ಕೊಡುತ್ತದೆ. ಸಂಕುಚಿತ ಮನೋಭಾವದವರು ಬದಲಾಗಬೇಕು,” ಎಂದು ಸಿ.ಟಿ. ರವಿ ಅವರು ಕರೆ ನೀಡಿದರು.

ಇದೇ ವೇಳೆ, ಇಸ್ಲಾಂ ಹೆಸರಿನಲ್ಲಿ ಅನ್ಯ ಧಾರ್ಮಿಕ ಕ್ಷೇತ್ರಗಳನ್ನು ಕಬಳಿಸುವುದು, ನಾಶ ಮಾಡುವುದು ಅಮಾನವೀಯ ಮತ್ತು ಅಧರ್ಮ ಎಂದು ಬಲವಾಗಿ ಖಂಡಿಸಿದರು. “ಇಸ್ಲಾಂ ಹೆಸರಿನಲ್ಲಿ ಬಲತ್ಕಾರ, ಲೂಟಿ ಮತ್ತು ಮತಾಂತರ ಮಾಡಲಾಗಿದೆ. ಇದನ್ನು ಭಾರತೀಯ ನಿದರ್ಶನಗಳು ಧರ್ಮ ಎಂದು ಒಪ್ಪುವುದಿಲ್ಲ, ಬೇಕಿದ್ದರೆ ಅದನ್ನು ಪೈಶಾಚಿಕ ಮತ ಎನ್ನಬಹುದು,” ಎಂದು ಆಕ್ರೋಶ ವ್ಯಕ್ತಪಡಿಸಿದರು.

error: Content is protected !!