Friday, December 5, 2025

ಪಾಂಡ್ಯ ಕ್ರೇಜ್‌ಗೆ ಪಂದ್ಯ ಶಿಫ್ಟ್! ಎಲ್ಲಾ ನಿಮಗೋಸ್ಕರ ಎಂದ ಆಯೋಜಕರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಈ ಬಾರಿ ಕ್ರೀಡೆಗಿಂತಲೂ ಹೆಚ್ಚು ಚರ್ಚೆಗೆ ಕಾರಣವಾದದ್ದು ಅಭಿಮಾನಿಗಳ ಅತಿಯಾದ ಉತ್ಸಾಹ. ದೇಶೀ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ ತಾರೆಗಳು ಮಿಂಚುತ್ತಿರುವ ಕಾರಣ ಪ್ರೇಕ್ಷಕರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು, ಕ್ರೀಡಾಂಗಣದ ಭದ್ರತೆಗೆ ಹೊಸ ಸವಾಲು ಸೃಷ್ಟಿಯಾಗಿದೆ.

ಮೊದಲಿನಿಂದ ಜಿಮ್ಖಾನಾ ಮೈದಾನದಲ್ಲಿ ನಡೆಯಬೇಕಿದ್ದ ಬರೋಡಾ–ಗುಜರಾತ್ ಪಂದ್ಯವನ್ನು ಅಚಾನಕ್‌ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಯಿತು. ಈ ನಿರ್ಧಾರಕ್ಕೆ ಪ್ರಮುಖ ಕಾರಣ ಬರೋಡಾ ಪರ ಆಡುತ್ತಿರುವ ಹಾರ್ದಿಕ್ ಪಾಂಡ್ಯ. ಅವರು ಮೈದಾನಕ್ಕೆ ಬಂದ ಕ್ಷಣದಿಂದಲೇ ಅಭಿಮಾನಿಗಳ ಗುಂಪು ಅವರನ್ನು ನೋಡುವ ಸಲುವಾಗಿ ಮೈದಾನಕ್ಕೆ ನುಗ್ಗಲು ಯತ್ನಿಸುತ್ತಿದ್ದು, ಆಯೋಜಕರು ತುರ್ತು ಭದ್ರತಾ ಕ್ರಮ ಕೈಗೊಳ್ಳಬೇಕಾಯಿತು.

ಅಭಿಮಾನಿಗಳ ಈ ರಭಸದಿಂದಾಗಿ ಪಂದ್ಯದಲ್ಲಿ ಯಾವುದೇ ಅಡಚಣೆ ಉಂಟಾಗಬಾರದು ಎಂಬ ಕಾರಣಕ್ಕೆ ದೊಡ್ಡ ಮೈದಾನಕ್ಕೆ ಸ್ಥಳಾಂತರ ಮಾಡುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಆಯೋಜಕರು ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿ, ಪೊಲೀಸ್ ಪಡೆಗಳು ಮತ್ತಷ್ಟು ಬಿಗಿ ಭದ್ರತೆ ಹೇರಿವೆ.

ಪಂದ್ಯದ ವಿಷಯಕ್ಕೆ ಬಂದರೆ, ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ತನ್ನ ವರ್ಗವನ್ನು ಮತ್ತೆ ಸಾಬೀತುಪಡಿಸಿದರು. ನಾಲ್ಕು ಓವರ್‌ಗಳಲ್ಲಿ ಕೇವಲ 16 ರನ್ ನೀಡಿ ಒಂದು ವಿಕೆಟ್ ಪಡೆದ ಅವರು ಬರೋಡಾಗೆ ಅದ್ಭುತ ಪ್ರಾರಂಭ ಕೊಟ್ಟರು. 40 ಎಸೆತಗಳಲ್ಲೇ ಗುರಿ ಬೆನ್ನಟ್ಟಿದ ಬರೋಡಾ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

error: Content is protected !!