Monday, December 8, 2025

ಸಾಲಕ್ಕೆ ಹೆದರಿದ ಅಮ್ಮ ಮಗನಿಗೆ ವಿಷ ಕೊಟ್ಟು, ತಾಯಿ ಜತೆ ಆತ್ಮಹತ್ಯೆಗೆ ಶರಣು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಾಲಕ್ಕೆ ಹೆದರಿ ಮಗನಿಗೆ ವಿಷ ಕುಡಿಸಿ ನಂತರ ತಾಯಿ ಮತ್ತು ಅಜ್ಜಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೋರಮಂಗಲದ ತಾವರೆಕೆರೆ ಬಳಿಯ ಎಸ್‌.ಜಿ ಪಾಳ್ಯದಲ್ಲಿ ಈ ಘಟನೆ ನಡೆದಿದೆ.

14 ವರ್ಷದ ಮಗ ಮೌನೀಶ್‌ ಗೆ ವಿಷವುಣಿಸಿದ ನಂತರ ತಾಯಿ ಸುಧಾ, ಅಜ್ಜಿ ಮುದ್ದಮ್ಮ ತಾವು ವಿಷ ಸೇವಿಸಿ ಆತ್ಮಹತ್ಯೆ ಮಾಡಿದ್ದಾರೆ. ಎಸ್​.ಜಿ ಪಾಳ್ಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಗಂಡನಿಂದ ಬೇರೆಯಾಗಿದ್ದ ಸುಧಾ ಬಿರಿಯಾನಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಆದರೆ ಇದರಿಂದ ಲಾಸ್ ಆಗಿದ್ದರಿಂದ ಅದನ್ನು ಬಿಟ್ಟು ಹಾಲು ಮಾರಲು ಮುಂದಾದರು.

ಹೆಚ್ಚು ಆದಾಯ ಬರದೆ ಇದ್ದಿದ್ದರಿಂದ ಕೊನೆಗೆ ಮನೆ ಕೆಲಸಕ್ಕೂ ಹೋಗುತ್ತಿದ್ದರು. ಆದರೆ ಮಾಡಿದ ಸಾಲ ಮತ್ತಷ್ಟು ಹೆಚ್ಚಾಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಪೊಲೀಸರು ಮೂವರ ಮೃತದೇಹವನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.

error: Content is protected !!