Friday, December 12, 2025

ಹೈದರಾಬಾದ್‌ನಲ್ಲಿ ಭಾರಿ ಬಂಡವಾಳ ಹೂಡಿಕೆ ಮಾಡ್ತಿದ್ದಾರಂತೆ ಸಲ್ಲು ಭಾಯ್: ದಕ್ಷಿಣದಲ್ಲಿ ಹೊಸ ಸಿನಿ ಯುಗ ಆರಂಭ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಸಿನಿಮಾ ಉದ್ಯಮದ ಭೂಗೋಳವೇ ನಿಧಾನವಾಗಿ ಬದಲಾಗುತ್ತಿದೆ. ಒಮ್ಮೆ ಮುಂಬೈಗೆ ಸೀಮಿತವಾಗಿದ್ದ ಬಾಲಿವುಡ್ ಈಗ ದಕ್ಷಿಣ ಭಾರತದತ್ತ ಮುಖ ಮಾಡಿವೆ. ಪ್ರೇಕ್ಷಕರ ಸ್ಪಂದನೆ, ತಾಂತ್ರಿಕ ಸಾಮರ್ಥ್ಯ ಮತ್ತು ಸರ್ಕಾರದ ಬೆಂಬಲ ಈ ಬದಲಾವಣೆಗೆ ವೇಗ ನೀಡಿದ್ದು, ಇದೀಗ ಹೈದರಾಬಾದ್ ಹೊಸ ಸಿನಿ ಹಬ್ ಆಗಿ ರೂಪುಗೊಳ್ಳುತ್ತಿದೆ.

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಹೈದರಾಬಾದ್‌ನಲ್ಲಿ ಭಾರಿ ಬಂಡವಾಳ ಹೂಡಿಕೆಗೆ ಮುಂದಾಗಿದ್ದಾರೆ. ‘ಸಲ್ಮಾನ್ ಖಾನ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್’ ಮೂಲಕ ಸುಮಾರು 10 ಸಾವಿರ ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿದ್ದು, ನಗರದ ಹೊರವಲಯದಲ್ಲಿ ಅತಿ ಐಷಾರಾಮಿ ಟೌನ್‌ಶಿಪ್ ನಿರ್ಮಿಸುವ ಯೋಜನೆ ಹೊಂದಿದ್ದಾರೆ.

ಇದರ ಜೊತೆಗೆ, ವಿಶ್ವಮಟ್ಟದ ಅತ್ಯಾಧುನಿಕ ಸಿನಿಮಾ ಸ್ಟುಡಿಯೋ ನಿರ್ಮಾಣಕ್ಕೂ ಸಲ್ಮಾನ್ ಖಾನ್ ಮುಂದಾಗಿದ್ದಾರೆ. ಚಿತ್ರೀಕರಣ, ಪ್ರೀ–ಪ್ರೊಡಕ್ಷನ್, ಪೋಸ್ಟ್–ಪ್ರೊಡಕ್ಷನ್ ಹಾಗೂ ತರಬೇತಿ ಕಾರ್ಯಾಗಾರಗಳಿಗೆ ಒಂದೇ ಸೂರಿನಡಿ ವ್ಯವಸ್ಥೆ ಕಲ್ಪಿಸಲಿರುವ ಈ ಸ್ಟುಡಿಯೋ, ಪೂರ್ಣ ಚಿತ್ರ ನಿರ್ಮಾಣಕ್ಕೆ ಸೂಕ್ತವಾಗಿರಲಿದೆ ಎಂದು ಹೇಳಲಾಗಿದೆ.

ಇದಕ್ಕೆ ಮುನ್ನ ನಟ ಅಜಯ್ ದೇವಗನ್ ಕೂಡ ಹೈದರಾಬಾದ್‌ನಲ್ಲಿ ವಿಎಫ್‌ಎಕ್ಸ್ ಸ್ಟುಡಿಯೋ ಸ್ಥಾಪನೆಗೆ ತೆಲಂಗಾಣ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಈ ಬೆಳವಣಿಗೆಗಳು ದಕ್ಷಿಣ ಭಾರತದ ಸಿನಿಮಾ ಕ್ಷೇತ್ರಕ್ಕೆ ಹೊಸ ಆಯಾಮ ನೀಡುವ ನಿರೀಕ್ಷೆ ಮೂಡಿಸಿವೆ.

error: Content is protected !!