ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆಯಾದ ಮೂರೇ ದಿನಕ್ಕೆ ವಧುವೊಬ್ಬಳು ಡಿವೋರ್ಸ್ ಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಇದರ ಜೊತೆಗೆ ಮದುವೆಗೆ ಮಾಡಿದ ಖರ್ಚನ್ನೂ ನೀಡಿ ಎಂದು ಡಿವೋರ್ಸ್ ಫೈಲ್ ಮಾಡಿದ್ದಾರೆ.
ಗೋರಖ್‌ಪುರದ ನವವಿವಾಹಿತ ಮಹಿಳೆಯೊಬ್ಬರು ಮೊದಲ ರಾತ್ರಿಯೇ ಅವರ ಪತಿ ದೈಹಿಕವಾಗಿ ದುರ್ಬಲವಾಗಿದ್ದು, ಲೈಂಗಿಕ ಸಂಬಂಧ ಹೊಂದಲು ಅಸಮರ್ಥ ಎಂದು ಒಪ್ಪಿಕೊಂಡಿದ್ದಾರೆ. ಈ ಕಾರಣದಿಂದ ನನಗೆ ಡಿವೋರ್ಸ್ ಬೇಕು ಎಂದು ಕೇಳಿಕೊಂಡಿದ್ದಾಳೆ.
ನಂತರ ವಧುವಿನ ಕುಟುಂಬ, ವರ “ತಂದೆಯಾಗಲು ಸಾಧ್ಯವಿಲ್ಲ” ಎಂದು ವೈದ್ಯಕೀಯ ವರದಿ ದೃಢಪಡಿಸಿದೆ ಎಂದು ಹೇಳಿಕೊಂಡಿದೆ. ಇದರಿಂದಾಗಿ ಉಡುಗೊರೆಗಳು ಮತ್ತು ಮದುವೆಯ ವೆಚ್ಚಗಳನ್ನು ಹಿಂದಿರುಗಿಸುವಂತೆ ಒತ್ತಾಯಿಸಿದೆ.
ಮಹಿಳೆ ಕಳುಹಿಸಿದ ಲೀಗಲ್ ನೋಟಿಸ್‌ನಲ್ಲಿ, ಅವರು ಹೀಗೆ ಹೇಳಿದ್ದಾರೆ: ನಾನು ದೈಹಿಕವಾಗಿ ಅಸಮರ್ಥನಾಗಿರುವ ವ್ಯಕ್ತಿಯೊಂದಿಗೆ ನನ್ನ ಜೀವನ ನಡೆಸಲು ಸಾಧ್ಯವಿಲ್ಲ. ಮದುವೆಯ ರಾತ್ರಿಯೇ ಅವರು ನನಗೆ ವಿಷಯ ಹೇಳಿದಾಗ ಆಘಾತವಾಯಿತು ಎಂದಿದ್ದಾರೆ.
ಇಂಜಿನಿಯರ್ ವರ ಪತ್ನಿಗೆ ಮೊದಲ ರಾತ್ರಿಯಂದು ಈ ವಿಷಯವನ್ನು ಹೇಳಿದ್ದಾರೆ. ಆದರೆ ಈ ವಿಷಯ ಮದುವೆಗೂ ಮುನ್ನ ಹೇಳದೇ ಮುಚ್ಚಿಟ್ಟು ಮಾಡಿರುವುದು ನಮಗಾದ ಅನ್ಯಾಯ ಎಂದು ಹುಡುಗಿಯ ಕಡೆಯವರು ಹೇಳಿದ್ದಾರೆ.

