ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾದ ಯುವ ಆಟಗಾರ, ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾ ಮತ್ತೊಂದು ಭರ್ಜರಿ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಕೇವಲ ನಾಲ್ಕು ಇನ್ನಿಂಗ್ಸ್‌ಗಳ ಮೂಲಕ ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಅವರ ಟಿ20 ಕ್ರಿಕೆಟ್‌ನ ಐತಿಹಾಸಿಕ ಮೈಲಿಗಲ್ಲನ್ನು ಮುರಿಯುವ ಅವಕಾಶ ಇವರ ಮುಂದಿದೆ.
ಟಿ20 ಕ್ರಿಕೆಟ್‌ನಲ್ಲಿ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ ಅವರು 2016ರಲ್ಲಿ 29 ಇನ್ನಿಂಗ್ಸ್‌ಗಳ ಮೂಲಕ ಬರೋಬ್ಬರಿ 1614 ರನ್ ಗಳಿಸಿದ್ದರು. 9 ವರ್ಷಗಳ ಹಿಂದೆ ಸ್ಥಾಪನೆಯಾದ ಈ ದಾಖಲೆಯನ್ನು ಈವರೆಗೆ ಯಾವುದೇ ಭಾರತೀಯ ಬ್ಯಾಟರ್ ಮುರಿದಿಲ್ಲ.
ಇದೀಗ 9 ವರ್ಷಗಳ ಬಳಿಕ ಯುವ ಆಟಗಾರ ಅಭಿಷೇಕ್ ಶರ್ಮಾ ಅವರು ಕೊಹ್ಲಿ ದಾಖಲೆಯ ಸಮೀಪಕ್ಕೆ ಬಂದಿದ್ದಾರೆ. ಈ ವರ್ಷ, ಅಭಿಷೇಕ್ ಶರ್ಮಾ ಅವರು ಆಡಿದ 37 ಇನ್ನಿಂಗ್ಸ್‌ಗಳ ಮೂಲಕ ಒಟ್ಟು 1516 ರನ್ ಕಲೆಹಾಕಿದ್ದಾರೆ.
ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿಯಲು ಅವರಿಗೆ ಇನ್ನು ಬೇಕಿರುವುದು ಕೇವಲ 99 ರನ್‌ಗಳು ಮಾತ್ರ!
ಆದರೆ ಈ ದಾಖಲೆಯನ್ನು ಮುರಿಯಲು ಅಭಿಷೇಕ್ ಶರ್ಮಾ ಅವರಿಗೆ ಇರುವ ಕಾಲಾವಕಾಶ ಮತ್ತು ಇನ್ನಿಂಗ್ಸ್‌ಗಳು ಸೀಮಿತವಾಗಿವೆ ಎಂಬುದು ಇಲ್ಲಿ ಗಮನಾರ್ಹ. ಪ್ರಸ್ತುತ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ನಾಲ್ಕು ಪಂದ್ಯಗಳಲ್ಲಿಯೇ (ಇನ್ನಿಂಗ್ಸ್‌ಗಳಲ್ಲಿಯೇ) ಅವರು 99 ರನ್ ಗಳಿಸಬೇಕಿದೆ.
ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ ಡಿಸೆಂಬರ್ 19 ರಂದು ಮುಕ್ತಾಯಗೊಳ್ಳಲಿದೆ. ಇದಾದ ಬಳಿಕ ಟೀಮ್ ಇಂಡಿಯಾ ಮತ್ತೆ ಟಿ20 ಪಂದ್ಯವಾಡುವುದು ಜನವರಿಯಲ್ಲಿ. ಹೀಗಾಗಿ, ಡಿಸೆಂಬರ್ ತಿಂಗಳೊಳಗೆ 99 ರನ್ ಬಾರಿಸಿದರೆ ಮಾತ್ರ ಅಭಿಷೇಕ್ ಶರ್ಮಾ ಅವರು ವಿರಾಟ್ ಕೊಹ್ಲಿಯ 1614 ರನ್‌ಗಳ ದಾಖಲೆಯನ್ನು ಮುರಿದು, ಭಾರತೀಯ ಟಿ20 ಕ್ರಿಕೆಟ್‌ನಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಬಹುದು.
ಅಭಿಷೇಕ್ ಶರ್ಮಾ ಅವರು ಈ ಸುವರ್ಣ ಅವಕಾಶವನ್ನು ಬಳಸಿಕೊಂಡು, ಕೊಹ್ಲಿಯ ಐತಿಹಾಸಿಕ ದಾಖಲೆಯನ್ನು ಈ ವರ್ಷವೇ ಮುರಿಯುತ್ತಾರೆಯೇ? ಕಾದು ನೋಡಬೇಕು.

