Tuesday, December 16, 2025

ಏಷ್ಯಾಕಪ್‌ಗೆ ಭಾರತದ ಶುಭಾರಂಭ: ವೈಭವ್ ಸಿಡಿಲಬ್ಬರ, ಯುಎಇಗೆ 434 ರನ್​ಗಳ ಬೃಹತ್ ಗುರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದುಬೈನಲ್ಲಿ ಇಂದಿನಿಂದ ಶುರುವಾಗಿರುವ 19 ವರ್ಷದೊಳಗಿನವರ (ಅಂಡರ್-19) ಏಕದಿನ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಭಾರತದ ಯುವ ಪಡೆ ಮೊದಲ ಪಂದ್ಯದಲ್ಲೇ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದೆ. ಆತಿಥೇಯ ಯುಎಇ ತಂಡದ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಇಳಿದ ಭಾರತ, ನಿಗದಿತ 50 ಓವರ್​ಗಳಲ್ಲಿ ಕೇವಲ 6 ವಿಕೆಟ್ ಕಳೆದುಕೊಂಡು ಬರೋಬ್ಬರಿ 433 ರನ್​ಗಳ ಬೃಹತ್ ಮೊತ್ತ ಕಲೆಹಾಕಿದೆ.

ತಂಡದ ಈ ದಾಖಲೆಯ ಮೊತ್ತಕ್ಕೆ ಮುಖ್ಯ ಕಾರಣ, ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಶತಕ. ವೈಭವ್ ಸೂರ್ಯವಂಶಿ ಅವರು ಯುಎಇ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ 171 ರನ್​ಗಳ ಭರ್ಜರಿ ಇನ್ನಿಂಗ್ಸ್ ಆಡಿದರು. ಅವರಿಗೆ ಉತ್ತಮ ಸಾಥ್ ನೀಡಿದ ಆರನ್ ವರ್ಗೀಸ್ ಮತ್ತು ವಿಹಾನ್ ಮಲ್ಹೋತ್ರಾ ಕೂಡ ತಲಾ 69 ರನ್​ಗಳ ಅಮೂಲ್ಯ ಕೊಡುಗೆ ನೀಡಿದರು.

ಈ ಗೆಲುವಿಗೆ ಯುಎಇ ತಂಡವು 50 ಓವರ್‌ಗಳಲ್ಲಿ 434 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಬೇಕಿದೆ.

error: Content is protected !!