ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಡುಗಡೆಯ ಮುನ್ನವೇ ನಕಾರಾತ್ಮಕ ಸದ್ದು ಹೆಚ್ಚಿದ್ದರೂ, ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಎಲ್ಲ ಅಂದಾಜಿಗೂ ವಿರುದ್ಧವಾಗಿ ಯಶಸ್ಸು ಕಂಡಿದೆ. ದೀರ್ಘ ರನ್‌ಟೈಮ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದ ನೆಗೆಟಿವಿಟಿ ನಡುವೆ ಸಿನಿಮಾ ಹೇಗಿರಬಹುದು ಎಂಬ ಅನುಮಾನ ಹೆಚ್ಚಿದ್ದರೂ, ಮೊದಲ ವಾರದಲ್ಲೇ ಚಿತ್ರ ಭರ್ಜರಿ ಕಲೆಕ್ಷನ್ ಮೂಲಕ ಎಲ್ಲರನ್ನು ಆಶ್ಚರ್ಯಕ್ಕೆ ಒಳಪಡಿಸಿದೆ.
ಚಿತ್ರಕ್ಕೆ ಬಿಡುಗಡೆಯ ದಿನ ಮಿಶ್ರ ಪ್ರತಿಕ್ರಿಯೆಯೇ ಸಿಕ್ಕಿದ್ದರೂ, ವಿಮರ್ಶಕರಿಂದ ಬಂದ ಪಾಸಿಟಿವ್ ಮಾತುಗಳಿಂದ ಕಲೆಕ್ಷನ್ ಏರಿಕೆಯಾಗಿದೆ. ಮಂಗಳವಾರದಿಂದ ಗುರುವಾರದವರೆಗೆ ದಿನವೂ ಸುಮಾರು 27 ಕೋಟಿ ಗಳಿಸಿದ ಸಿನಿಮಾ ಈಗಾಗಲೇ ಮೊದಲ ಏಳು ದಿನಗಳಲ್ಲಿ 208 ಕೋಟಿ ರೂ. ಸಂಗ್ರಹಿಸಿದೆ ಎಂದು ವರದಿ ತಿಳಿಸಿದೆ. ತೆಲುಗಿನಲ್ಲಿ ‘ಅಖಂಡ 2’ ಹಾಗೂ ಕನ್ನಡದಲ್ಲಿ ‘ಡೆವಿಲ್ ’ ಬಿಡುಗಡೆಯಾದರೂ, ಇವುಗಳ ಸ್ಪರ್ಧೆ ಧುರಂಧರ್‌ಗೆ ಹೆಚ್ಚಿನ ಪರಿಣಾಮ ಬೀರಿಲ್ಲ ಎಂಬುದು ಗಮನಾರ್ಹ.

