Friday, December 12, 2025

ಮಾಯವಾಗ್ತಿದ್ಯಾ ಮಾತೃಭಾಷೆ? ರಾಜ್ಯದಲ್ಲಿ ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗೆ ಡಿಸಿಗಳಿಗೆ ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಕಡ್ಡಾಯ ಕನ್ನಡ ಭಾಷಾ ನಾಮಫಲಕ ಅಳವಡಿಕೆ ಕುರಿತು ನಿಗಾವಹಿಸಲು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಆದಷ್ಟೂ ಬೇಗ ರಾಜ್ಯದಲ್ಲಿ ನಿಯಮ ಸಂಪೂರ್ಣ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ಉಮಾಶ್ರೀ ಪ್ರಶ್ನೆ ಕೇಳಿದ್ರು. ಕನ್ನಡ ನಾಮಫಲಕ ಅಳವಡಿಸೋ ಅಭಿಯಾನ ಸಂಪೂರ್ಣ ಆಗಿಲ್ಲ. ನಾಮಫಲಕ ಸಂಪೂರ್ಣ ಆಗಬೇಕು. ಇದು ನಿರಂತರವಾಗಿ ಆಗೋ ಕೆಲಸ. ಅಪೂರ್ಣ ಆಗೋ ಪ್ರಶ್ನೆ ಇಲ್ಲ ಅಂತ ಸಚಿವರು ಹೇಳ್ತಾರೆ. ಹುಬ್ಬಳ್ಳಿಯಲ್ಲಿ ಉತ್ತಮವಾಗಿ ಆಗಿದೆ. ಮೈಸೂರಿನಲ್ಲಿ ಜಾರಿ ಆಗಿಲ್ಲ. ಕನ್ನಡ ನಾಮಫಲಕ ಕಡ್ಡಾಯ ಶೀಘ್ರವೇ ಮುಗಿಸಬೇಕು. ಬೆಂಗಳೂರಿನಲ್ಲಿ ಕಡ್ಡಾಯ ಕನ್ನಡ ನಾಮಫಲಕ ನಿಯಮ ಸಮರ್ಪಕವಾಗಿ ಆಗ್ತಿಲ್ಲ. ಇದರಲ್ಲಿ ಯಾರ ನಿರ್ಲಕ್ಷ್ಯ ಆಗುತ್ತಿದೆ. ಅನುಷ್ಠಾನ ಸಮಿತಿ ಸರ್ಕಾರ ಮಾಡಿಲ್ಲ. ಕೂಡಲೇ ಕಡ್ಡಾಯ ಕನ್ನಡ ನಾಮಫಲಕ ಆದೇಶ ಪೂರ್ಣ ಆಗಬೇಕು ಅಂತ ಒತ್ತಾಯ ಮಾಡಿದರು.

ಇದಕ್ಕೆ ಸಚಿವ ತಂಗಡಗಿ ಉತ್ತರ ಕೊಟ್ಟು, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಮೂಲ ಕಾಯಿದೆ 17ನೇ ಪ್ರಕರಣದ ಆರನೇ ಉಪಪ್ರಕರಣದಂತೆ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ ಮತ್ತು ಮಂಜೂರಾತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ, ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್ ಗಳು,ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್ಗಳು ಮುಂತಾದವುಗಳು ತಮ್ಮ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು 60% ರಷ್ಟು ಪ್ರದರ್ಶಿಸಲಾಗಿದೆ ಎಂದರು.

error: Content is protected !!