Thursday, December 18, 2025

ರೈತರನ್ನು ಮದುವೆಯಾಗೋ ಹೆಣ್ಣಿಗೆ ಐದು ಲಕ್ಷರೂ. ನೀಡಿ: ಮಂಡ್ಯ ಅನ್ನದಾತರ ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರೈತರನ್ನು ವರಿಸೋದಕ್ಕೆ ಹೆಣ್ಣುಮಕ್ಕಳು ಹಿಂದುಮುಂದು ನೋಡುತ್ತಿದ್ದಾರೆ. ರೈತರ ಕೈ ಹಿಡಿಯುವ ವಧುವಿಗೆ ಐದು ಲಕ್ಷ ರೂ. ಪ್ರೋತ್ಸಾಹ ಧನ ನೀಡಿ ಎಂದು ಮಂಡ್ಯ ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ರೈತರ ಮಕ್ಕಳು ಮದುವೆಯಾಗಲು ಹೆಣ್ಣು ಕೊಡುವುದಕ್ಕೆ  ಹೆಣ್ಣು ಹೆತ್ತವರು ಹಿಂದೇಟು ಹಾಕುತ್ತಿದ್ದಾರೆ. 
ಕಂಕಣ‌ ಭ್ಯಾಗ್ಯವಿಲ್ಲದೇ‌  ಹಳ್ಳಿಗಳಲ್ಲಿ ಯುವ ರೈತರು  ಪರಿತಪಿಸುತ್ತಿದ್ದಾರೆ.

ಮಂಡ್ಯ ಜಿಲ್ಲೆಯೊಂದರಲ್ಲೇ ಸಾವಿರಾರು ಯುವಕರು ಮದುವೆಯಾಗದೆ ಉಳಿದಿದ್ದಾರೆ. ರೈತರ ಮಕ್ಕಳ ಮದುವೆಗಾಗಿ ಪ್ರೋತ್ಸಾಹಧನ ನೀಡಲು‌ ಆಗ್ರಹಿಸಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿನೂತನ ಹೋರಾಟ ನಡೆಸುತ್ತಿದ್ದಾರೆ .  ಅಣುಕು ಪ್ರದರ್ಶನ ಮಾಡುವ ಜೊತೆಗೆ ಡಿಸಿಗೆ ಮನವಿ ಸಲ್ಲಿಕೆ ಮಾಡಿದ್ದಾರೆ.  ವರನಂತೆ ಹಣೆಗೆ ಬಾಸಿಂಗ, ತಲೆಗೆ ಮೈಸೂರು ಪೇಟ ಹಾಕಿ ಕೊಂಡು ಅಣಕು ಪ್ರದರ್ಶನ ಮಾಡಿದ್ದಾರೆ.  ಮಂಡ್ಯ ಡಿ.ಸಿ. ಮೂಲಕ ರಾಜ್ಯ ಸರ್ಕಾರಕ್ಕೆ ಬಿಜೆಪಿ ಕಾರ್ಯಕರ್ತರು ಮನವಿ ಸಲ್ಲಿಸಿದ್ದಾರೆ.  ರೈತರನ್ನ ಮದುವೆಯಾಗುವ ಯುವತಿಯರಿಗೆ 5 ಲಕ್ಷ ಪ್ರೋತ್ಸಾಹ ಧನ ನೀಡುವಂತೆ ಆಗ್ರಹಿಸಿದ್ದಾರೆ.  ಶಾದಿ ಭಾಗ್ಯ ಮಾದರಿ ಹೊಸ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ. 

error: Content is protected !!