Sunday, December 14, 2025

ಟೀಂ ಇಂಡಿಯಾದ ಹಾರ್ಡ್‌ವರ್ಕ್ ಆಟಗಾರ ಕೊಹ್ಲಿ ಅಲ್ವಂತೆ..! ಜೈಸ್ವಾಲ್ ಹೇಳಿದ್ದು ಯಾರ ಹೆಸರು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಕ್ರಿಕೆಟ್‌ನಲ್ಲಿ ಶ್ರಮ ಮತ್ತು ಶಿಸ್ತು ಎಂಬ ಪದಗಳಿಗೆ ಹೊಸ ಅರ್ಥ ನೀಡಿದ ಆಟಗಾರರ ಸಾಲಿನಲ್ಲಿ ವಿರಾಟ್ ಕೊಹ್ಲಿ ಹೆಸರು ಮೊದಲಿಗೆ ಬರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ತಂಡದ ಒಳಗೇ ನಡೆಯುತ್ತಿರುವ ಪರಿಶ್ರಮದ ಸ್ಪರ್ಧೆಯಲ್ಲಿ ಹೊಸ ಹೆಸರೊಂದನ್ನು ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮುಂದಿಟ್ಟಿದ್ದಾರೆ. ಟೀಂ ಇಂಡಿಯಾದಲ್ಲಿ ಅತಿ ಹೆಚ್ಚು ಹಾರ್ಡ್‌ವರ್ಕ್ ಮಾಡುವ ಆಟಗಾರ ಯಾರು ಎಂಬ ಪ್ರಶ್ನೆಗೆ ಯಶಸ್ವಿ ಜೈಸ್ವಾಲ್ ನೀಡಿದ ಉತ್ತರ ಈಗ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ವಿರಾಟ್ ಕೊಹ್ಲಿ, ಫಿಟ್ನೆಸ್ ಮತ್ತು ಬದ್ಧತೆಯ ಮೂಲಕ ತಮ್ಮದೇ ಆದ ಮಾನದಂಡ ನಿರ್ಮಿಸಿದ್ದಾರೆ. 37ರ ಹರೆಯದಲ್ಲೂ ಯುವ ಆಟಗಾರರಿಗೆ ಸವಾಲಾಗುವಷ್ಟು ಚುರುಕಾಗಿ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅವರ ಪರಿಶ್ರಮದ ಪ್ರತಿಫಲವೇ.

ಆದರೆ ಜೈಸ್ವಾಲ್ ಅವರ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಶುಭ್‌ಮನ್ ಗಿಲ್ ಅತ್ಯಂತ ನಿರಂತರವಾಗಿ ಶ್ರಮಿಸುತ್ತಿರುವ ಆಟಗಾರ. ಫಿಟ್ನೆಸ್, ಆಹಾರ ಪದ್ಧತಿ, ಕೌಶಲ್ಯಾಭ್ಯಾಸ ಮತ್ತು ತರಬೇತಿಯಲ್ಲಿ ಗಿಲ್ ತೋರಿಸುವ ಶಿಸ್ತು ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ. ಇದರ ಜತೆಗೆ ಹಾರ್ಡ್‌ ವರ್ಕ್ ವಿಚಾರದಲ್ಲಿ ಅವರು ನಿರಂತರತೆ ಕಾಯ್ದುಕೊಳ್ಳುತ್ತಾ ಬಂದಿದ್ದಾರೆ ಎಂದು ಅವರು ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಿಲ್ ಪ್ರದರ್ಶಿಸಿದ ಜವಾಬ್ದಾರಿಯುತ ಆಟವೂ ಅವರ ಮಾತಿಗೆ ಬಲ ನೀಡಿದೆ.

error: Content is protected !!