ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದಾಗಿರುವ ಪಾನೀಯ ಎಂದರೆ ಶುಂಠಿ ಚಹಾ. ಮನೆಮದ್ದುಗಳ ಪಟ್ಟಿಯಲ್ಲಿ ಸದಾ ಇರುವ ಶುಂಠಿ, ರುಚಿಗೆ ಮಾತ್ರವಲ್ಲದೆ ಆರೋಗ್ಯ ಲಾಭಗಳಿಗೂ ಹೆಸರುವಾಸಿ. ಇತ್ತೀಚೆಗೆ ತೂಕ ಇಳಿಕೆ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿರುವ ಈ ದಿನಗಳಲ್ಲಿ, “ಶುಂಠಿ ಚಹಾ ನಿಜಕ್ಕೂ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆಯೇ?” ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ. ಈ ಕುರಿತು ನಡೆದ ಸಂಶೋಧನೆಗಳು ಕೆಲವು ಆಸಕ್ತಿಕರ ಮಾಹಿತಿಗಳನ್ನು ನೀಡುತ್ತವೆ.
- ಸಂಶೋಧನೆ ಏನು ಸೂಚಿಸುತ್ತದೆ?: ವೈದ್ಯಕೀಯ ಅಧ್ಯಯನಗಳ ಪ್ರಕಾರ, ನಿಯಮಿತವಾಗಿ ಶುಂಠಿಯನ್ನು ಆಹಾರದಲ್ಲಿ ಬಳಸುವುದರಿಂದ ದೇಹದ ತೂಕ ಮತ್ತು ಸೊಂಟದ ಅಳತೆ ಮೇಲೆ ಸಕಾರಾತ್ಮಕ ಪರಿಣಾಮ ಕಂಡುಬಂದಿದೆ. ಶುಂಠಿ ಸೇವನೆಯು ಉಪವಾಸದ ಗ್ಲೂಕೋಸ್ ಮಟ್ಟ ಮತ್ತು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡಬಹುದು ಎಂದು ಹೇಳಲಾಗಿದೆ.
- ತೂಕ ನಷ್ಟಕ್ಕೆ ಎಷ್ಟು ಪರಿಣಾಮಕಾರಿ?: ಶುಂಠಿ ಒಂದೇ ತೂಕ ಇಳಿಸುವ ಮಾಯಾ ಔಷಧಿ ಅಲ್ಲ. ಆದರೆ, ದಿನನಿತ್ಯದ ಚಹಾಕ್ಕೆ ಶುಂಠಿಯನ್ನು ಸೇರಿಸಿದರೆ ಮೆಟಾಬಾಲಿಸಂ ಚುರುಕಾಗಲು, ಜೀರ್ಣಕ್ರಿಯೆ ಸುಧಾರಿಸಲು ಸಹಕಾರಿ.
- ಕೊಲೆಸ್ಟ್ರಾಲ್ ಮತ್ತು ಮಧುಮೇಹದ ಮೇಲೆ ಪ್ರಭಾವ: ಶುಂಠಿಯು ಉತ್ತಮ (HDL) ಕೊಲೆಸ್ಟ್ರಾಲ್ ಮಟ್ಟವನ್ನು ಸ್ವಲ್ಪ ಹೆಚ್ಚಿಸಲು ನೆರವಾಗುತ್ತದೆ. ಜೊತೆಗೆ ಮಧುಮೇಹ ಮತ್ತು ಕೆಲವು ದೀರ್ಘಕಾಲೀನ ರೋಗಗಳ ಅಪಾಯವನ್ನು ಕಡಿಮೆ ಮಾಡುವಲ್ಲಿ ಪೂರಕ ಪಾತ್ರ ವಹಿಸುತ್ತದೆ.
- ಇತರೆ ಆರೋಗ್ಯ ಲಾಭಗಳು: ಶುಂಠಿ ವಾಂತಿ, ವಾಕರಿಕೆ, ಉರಿಯೂತ ಕಡಿಮೆ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿಯೂ ಇದು ಉಪಯುಕ್ತ.
ಒಟ್ಟಿನಲ್ಲಿ, ಸಮತೋಲನ ಆಹಾರ ಮತ್ತು ವ್ಯಾಯಾಮದ ಜೊತೆಗೆ ಶುಂಠಿ ಚಹಾವನ್ನು ದಿನಚರಿಯಲ್ಲಿ ಸೇರಿಸಿಕೊಂಡರೆ, ಆರೋಗ್ಯಕರ ತೂಕ ನಿರ್ವಹಣೆಗೆ ಇದು ಒಳ್ಳೆಯ ಸಹಾಯಕವಾಗಬಹುದು.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

