ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮೊಟ್ಟೆಯಲ್ಲಿ ಕ್ಯಾನ್ಸರ್ ಅಂಶ ಪತ್ತೆಯಾಗಿದೆ ಅನ್ನೋ ವಿಚಾರ ಹಲ್ಚಲ್ ಎಬ್ಬಿಸಿದೆ. ಕೆಲ ಮೊಟ್ಟೆಗಳಲ್ಲಿ ನೈಟ್ರೋಫ್ಯೂರಾನ್ ಎಂಬ ಔಷಧದ ಕಣಗಳು ಕಂಡುಬಂದಿದ್ದು, ಇದು ಡಿಎನ್‌ಎಯಿಂದ ಸಂತಾನೋತ್ಪತ್ತಿ ಅಂಗಗಳು ಮತ್ತು ರೋಗನಿರೋಧಕ ವ್ಯವಸ್ಥೆಗೆಹಾನಿ ಮಾಡುತ್ತದೆ. ಅಲ್ಲದೇ ಇದು ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳಿಗೂ ಕಾರಣವಾಗಬಹುದು ಎನ್ನಲಾಗ್ತಿದೆ. ಈ ಕುರಿತ ವಿಡಿಯೋ ಬಗ್ಗೆ ನಾನಾ ಚರ್ಚೆ ಆಗ್ತಿದೆ.
ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ ಚರ್ಚೆ ಹಿನ್ನಲೆ ಆಹಾರ ಹಾಗೂ ಗುಣಮಟ್ಟ ಇಲಾಖೆ ಫುಲ್ ಅಲರ್ಟ್ ಆಗಿದೆ. ಬೆಂಗಳೂರು ಸೇರಿದ್ದಂತೆ ರಾಜ್ಯದ ಸುಮಾರು ರಾಜ್ಯದಲ್ಲಿ 200ಕ್ಕೂ ಹೆಚ್ಚು ಕಡೆ ಮೊಟ್ಟೆ ಸ್ಯಾಂಪಲ್ಸ್ ಕಲೆಕ್ಟ್ ಮಾಡಿದೆ. ಬೆಂಗಳೂರಲ್ಲಿ ಸೂಪರ್ ಮಾರ್ಕೆಟ್, ಮಾರ್ಟ್, ಮಾರುಕಟ್ಟೆ ಸೇರಿ ಸುಮಾರು 50ಕ್ಕೂ ಹೆಚ್ಚು ಕಡೆ ಸ್ಯಾಂಪಲ್ಸ್ ಸಂಗ್ರಹಿಸಲಾಗಿದೆ.
ಮೊಟ್ಟೆ ಸ್ಯಾಂಪಲ್ಸ್ ಪಡೆದಿರುವ ಆಹಾರ ಇಲಾಖೆ ಲ್ಯಾಬ್ ಟೆಸ್ಟ್ಗೆ ಒಳಪಡಿಸಲು ಮುಂದಾಗಿದೆ. ಇದರ ಜೊತೆಗೆ ಮೊಟ್ಟೆಗಳ ಕುರಿತು ವರದಿ ಸಿದ್ಧಪಡಿಸಲು ಸಹ ಆಹಾರ ಹಾಗೂ ಗುಣಮಟ್ಟ ಇಲಾಖೆ ತೀರ್ಮಾನಿಸಿದ್ದು, ಮಂದಿನ ವಾರದಲ್ಲಿ ಮೊಟ್ಟೆಗಳ ವರದಿ ಆರೋಗ್ಯ ಇಲಾಖೆಯ ಕೈ ಸೇರುವ ಸಾಧ್ಯತೆ ಇದೆ.

