Tuesday, December 16, 2025

ಮಾರ್ಕ್ ಸಿನಿಮಾದ ‘ಮಸ್ತ್ ಮಲೈಕಾ’ ಸಾಂಗ್ ರಿಲೀಸ್: ಸುದೀಪ್ ಜತೆ ಸೊಂಟ ಬಳುಕಿಸಿದ ನಿಶ್ವಿಕಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಸ್ಮಸ್ ಹಬ್ಬದ ಸಂಭ್ರಮಕ್ಕೆ ಕನ್ನಡ ಚಿತ್ರರಂಗದಿಂದ ಪಾರ್ಟಿ ಮೂಡ್ ಹಾಡೊಂದು ಹೊರಬಿದ್ದಿದೆ. ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಮಾರ್ಕ್’ನ ‘ಮಸ್ತ್ ಮಲೈಕಾ’ ಹಾಡು ಇದೀಗ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಹಾಡಿನಲ್ಲಿ ನಟಿ ನಿಶ್ವಿಕಾ ನಾಯ್ಡು ತಮ್ಮ ಸ್ಟೈಲಿಷ್ ಡ್ಯಾನ್ಸ್ ಮೂಲಕ ಮಿಂಚಿದ್ದು, ಸುದೀಪ್ ಅವರೊಂದಿಗೆ ಅವರ ಹೆಜ್ಜೆಗಳು ಸಾಂಗ್‌ಗೆ ವಿಶೇಷ ಕಳೆ ನೀಡಿವೆ. ಹೊಸ ವರ್ಷದ ಆಚರಣೆಗಳಲ್ಲಿ ಈ ಹಾಡು ಪ್ರಮುಖ ಪ್ಲೇಲಿಸ್ಟ್ ಆಗುವ ಲಕ್ಷಣ ಕಾಣಿಸುತ್ತಿದೆ.

ಈ ಚಿತ್ರಕ್ಕೆ ಅಜನೀಶ್ ಬಿ. ಲೋಕನಾಥ್ ಸಂಗೀತ ಸಂಯೋಜನೆ ನೀಡಿದ್ದು, ಅನೂಪ್ ಭಂಡಾರಿ ಸಾಹಿತ್ಯ ರಚಿಸಿದ್ದಾರೆ. ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಹಾಡು ಬಿಡುಗಡೆಯಾಗಿದೆ. ಕನ್ನಡ ಆವೃತ್ತಿಗೆ ಸುದೀಪ್ ಪುತ್ರಿ ಸಾನ್ವಿ ಮತ್ತು ನಕಾಶ್ ಅಜೀಜ್ ಧ್ವನಿ ನೀಡಿದ್ದಾರೆ. ಇದಕ್ಕೂ ಮುನ್ನ ಬಿಡುಗಡೆಯಾಗಿದ್ದ ‘ಸೈಕೋ ಸೈತಾನ್’ ಹಾಡು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ವಿಜಯ್ ಕಾರ್ತಿಕೇಯನ್ ನಿರ್ದೇಶನದ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ರಂದು ತೆರೆಗೆ ಬರಲಿದೆ. ಟ್ರೇಲರ್ ಮೂಲಕವೇ ಕುತೂಹಲ ಹೆಚ್ಚಿಸಿರುವ ಚಿತ್ರದಲ್ಲಿ ದೀಪ್ಷಿಕಾ, ನವೀನ್ ಚಂದ್ರ, ರೋಶಿನಿ ಪ್ರಕಾಶ್ ಸೇರಿದಂತೆ ದೊಡ್ಡ ತಾರಾಗಣ ಇದೆ. ‘ಸತ್ಯ ಜ್ಯೋತಿ ಫಿಲ್ಮ್ಸ್’ ಮತ್ತು ‘ಕಿಚ್ಚ ಕ್ರಿಯೇಷನ್’ ನಿರ್ಮಾಣದ ಈ ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.

error: Content is protected !!