ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈಲಿನ ಚೈನ್ ಎಳೆದಿದ್ದನ್ನು ಪ್ರಶ್ನಿಸಿದ್ದಕ್ಕೆ ಆರ್ಪಿಎಫ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪುಂಡಾಟ ನಡೆಸಿದ್ದವರು ಪೊಲೀಸರ ಅತಿಥಿಯಾಗಿದ್ದಾರೆ.
ಕುಡಿದ ಮತ್ತಿನಲ್ಲಿದ್ದ ಮೂವರು ಆರೋಪಿಗಳು ಬೆಂಗಳೂರಿನಿಂದ ಗೋವಾಗೆ ಹೊರಟಿದ್ದ ಯಶವಂತಪುರ-ವಾಸ್ಕೋಡಗಾಮ ರೈಲಿನ ಚೈನ್ ಎಳೆದಿದ್ದಾರೆ. ಇದನ್ನು ಗಮನಿಸಿದ ಆರ್ಪಿಎಫ್ ಸಿಬ್ಬಂದಿ ಪ್ರಶ್ನೆ ಮಾಡಿದರು. ಈ ವೇಳೆ ಪುಂಡರು ಆರ್ಪಿಎಫ್ ಸಿಬ್ಬಂದಿಯನ್ನು ತಳ್ಳಿ, ಹಲ್ಲೆ ಮಾಡಿದ್ದಾರೆ. ಕೂಡಲೇ ಹೆಚ್ಚಿನ ಆರ್ಪಿಎಫ್ ಸಿಬ್ಬಂದಿ ಸ್ಥಳಕ್ಕೆ ಬಂದು ಕಿಡಿಗೇಡಿಗಳನ್ನು ವಶಕ್ಕೆ ಪಡೆದಿದ್ದಾರೆ.
ಸದ್ಯ ಯಶವಂತಪುರ ರೈಲ್ವೆ ಠಾಣೆಯಲ್ಲಿ ಆರ್ಪಿಎಫ್ ಸಿಬ್ಬಂದಿ ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ. ರೈಲಿನ ಚೈನ್ ಎಳೆದು, ರೈಲ್ವೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಮೂವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಪುಂಡರ ಗಲಾಟೆಯಿಂದಾಗಿ ಸ್ವಲ್ಪ ತಡವಾಗಿ ವಾಸ್ಕೋಡ ಗಾಮಾ ಟ್ರೈನ್ ಹೊರಟಿದೆ.
ಎಣ್ಣೆ ಏಟಲ್ಲಿ ರೈಲಿನ ಚೈನ್ ಎಳೆದು ಕಿರಿಕ್ ಮಾಡಿದ ಬಾಯ್ಸ್ ಅಂದರ್!

