Tuesday, December 16, 2025

CINE |ಸಂಗೀತ ಕ್ಷೇತ್ರದ ದಂತಕಥೆ ಎಂ.ಎಸ್. ಸುಬ್ಬಲಕ್ಷ್ಮಿ ಬಯೋಪಿಕ್‌ಗೆ ಹೀರೋಯಿನ್‌ ಫೈನಲ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತೀಯ ಸಂಗೀತ ಕ್ಷೇತ್ರದ ದಂತಕಥೆ ಎಂ.ಎಸ್. ಸುಬ್ಬಲಕ್ಷ್ಮಿ ಅವರ ಜೀವನ ಚರಿತ್ರೆ ಆಧಾರಿತ ಚಿತ್ರದಲ್ಲಿ ಸಾಯಿ ಪಲ್ಲವಿ ಪ್ರಧಾನ ಪಾತ್ರದಲ್ಲಿ ನಟಿಸುವುದು ಬಹುತೇಕ ಖಚಿತವಾಗಿದೆ. ಅಧಿಕೃತವಾಗಿ ಘೋಷಣೆಯಷ್ಟೇ ಬಾಕಿ ಇದೆ. ಈ ಚಿತ್ರವನ್ನು ಗೌತಮ್ ತಿನ್ನನುರಿ ನಿರ್ದೇಶಿಸಲಿದ್ದು, ಗೀತಾ ಆರ್ಟ್ಸ್ ಚಿತ್ರ ನಿರ್ಮಿಸಲಿದೆ. ಈ ಸಿನಿಮಾ ಪ್ರಸ್ತುತ ಪ್ರೀ ಪ್ರೊಡಕ್ಷನ್ ಹಂತದಲ್ಲಿದೆ.

ಶಾಸ್ತ್ರೀಯ ಸಂಗೀತದ ಮೇರು ಗಾಯಕಿ ಎಂ.ಎಸ್ ಸುಬ್ಬಲಕ್ಷ್ಮಿ ಜೀವನಗಾಥೆಯ ಪಾತ್ರಕ್ಕಾಗಿ ಸಾಯಿ ಪಲ್ಲವಿ ನಟಿಸುತ್ತಿರುವುದು ವಿಶೇಷ. ಈಗಾಗ್ಲೇ ಅನೇಕ ಬಯೋಪಿಕ್ ಚಿತ್ರಗಳಲ್ಲಿ ನಟಿಸಿ ಪಾತ್ರಕ್ಕೆ ಜೀವ ತುಂಬಿರುವ ಸಹಜ ಸೌಂದರ್ಯವತಿ ಇದೀಗ ಭಾರತದ ಸಂಗೀತ ಕ್ಷೇತ್ರದ ಧೀಮಂತೆಯ ಪಾತ್ರದಲ್ಲಿ ಹೇಗೆ ಕಾಣಿಸಿಕೊಳ್ತಾರೆ ಅನ್ನೋದನ್ನ ನೋಡುವ ಕುತೂಹಲ ಅವರ ಅಭಿಮಾನಿಗಳಲ್ಲಿ ಮನೆಮಾಡಿದೆ.

error: Content is protected !!